ನಾನೆಂಬದೇನೋ?..
ಆಸೆಯೆಂಬ ನೊಗವೊತ್ತು
ಜಂಭದ ಬೀಜ ಬಿತ್ತಿದರೇನು
ನೀಚತನದ ಕಳೆ ಬೆಳೆದು
ಕಾಲಗರ್ಭದಿ ಎಡವಿ ಬಿದ್ದಿತು
ನೋಡಾ ಮಾಯೆಯ ಜಗದೊಳಗ.
ಹುಚ್ಚು ಕುದುರೆಯನೇರಿ
ಅಸ್ತoಗತ ಸವಾರಿ ಮಾಡಿ
ಸಾಗುವ ಸಿಮಾವಿಲ್ಲದ ದಾರಿ
ಗುರಿಹುಡುಕಿ ಗುರುವ ಮರೆತರೆ
ಸಾಧ್ಯವಾದೀತೇನಾ ಜಗದೊಳಗ
ಹುಡುಹುಡುಕಿ ಮತ್ತದೇ ತಾಕಿತು
ಇರುವ ಭಾಗ್ಯವ ಮರೆತು
ಮತ್ತೆ ಮತ್ತೆ ಚಿಂತೆಗೆ ನೊಕೀತು
ಕಾಣಬಲ್ಲೆನೇ ಆ ಒಂದು ದಿನ
ನೆರಳು ನೀಡಿದ ಬದುಕನಾ…
ತಪಗೈದು ಪಡೆದ ಭಾಗ್ಯವಿದು
ಹಿರಿತಲೆಗಳ ಶಾಂತಿ ಮಂತ್ರವಿದು
ಕರ್ಮಭೂಮಿಯ ಫಲವಿದು
ಶ್ರಮದ ಬದುಕು ಸಾರ್ಥಕ ಮಾಡಿಕೋ
ಇಹ ಪರದ ಜೀವನವನಾ…..
-ವೀರೇಶ್ ಬಿ ಎಮ್ ಜಿ, ದಾವಣಗೆರೆ
ತುಂಬಾ ಅರ್ಥಪೂರ್ಣವಾದ ಕವಿತೆ… ಕವಿ ರಾಕ್ಷಸ ವೀರೇಶ್ ಅವರು ಪದಗಳ ಹೆಕ್ಕುವಿಕೆಯೇ ಅದ್ಭುತ
ಧನ್ಯವಾದಗಳು… ಸರ್
ಚಂದದ ಸಾಲುಗಳು
ಬದುಕಿನ ಹೂರಣದ ಅನಾವರಣ.. ಸರಳ ಸುಂದರ ಸಾಲುಗಳಲ್ಲಿ ಪಡಿಮೂಡಿಸಿರುವುದು…ಮುದತಂದಿತು…ಸಾರ್ ಧನ್ಯವಾದಗಳು ಸಾರ್
ಧನ್ಯವಾದಗಳು ಮೇಡಮ್ ನಿಮ್ಮ ಸವಿ ನುಡಿಗಳಿಗೆ..
ಆಧ್ಯಾತ್ಮಿಕ ತತ್ವವನ್ನು ಸುಲಭವಾಗಿ ಅರ್ಥೈಸಿರುವ ಸಹಜ ಸುಂದರ ಪದಪುಂಜಗಳು.
ಇಹ ಪರದ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಆಧ್ಯಾತ್ಮಿಕ ಪಥವನ್ನು ತೋರಿಸುವ ಸುಂದರ ಕವನ