ನಮ್ಮವರ ಭವಿಷ್ಯ ನಮ್ಮ ಕೈಯಲ್ಲಿ….
ಒಂದೂರಲ್ಲಿ ಒಂದು ಒಬ್ಬ ವಯಸ್ಸಾದ ಮದುಕನಿದ್ದನು. ಆತನು ಮಳೆಗಾಲ ಬರುವುದಕ್ಕೂ ಮುಂಚೆ ಊರಿನ ಮಕ್ಕಳನ್ನು ಸೇರಿಸಿಕೊಂಡು ಪ್ರತಿನಿತ್ಯ ಹಾದಿ ಬೀದಿಯಲ್ಲಿ ಜನರು ತಿಂದು ಬಿಸಾಡಿದ ಹಣ್ಣಗಳ ಬೀಜಗಳೆನ್ನಾದರೂ ಸಿಕ್ಕರೆ ತಂದು ಬೀಜದುಂಡೆಗಳನ್ನಾಗಿ ಮಾಡಿಟ್ಟಕೊಳ್ಳುತ್ತಿದ್ದನು.
ಇದನ್ನು ಗಮನಿಸಿದ ಊರಿನ ಮಕ್ಕಳು ತಾತ ಯಾಕೆ ಈ ರೀತಿ ನೀವು ನಮ್ಮಿಂದ ಬೀಜದುಂಡೆಗಳನ್ನು ಮಾಡಿಸುತ್ತಿದ್ದೀರಿ?, ಇದರಿಂದ ಯಾರಿಗೆ ಏನು ಪ್ರಯೋಜನ? ಎಂದು ಕೇಳಿದರು.
ಆಗ ಮುದುಕನು ನೋಡಿ ಮಕ್ಕಳೇ ನೀವೆಲ್ಲ ಬಾಯಾರಿಕೆಯಾದಾಗ ನೀರು ಕುಡಿಯುವಿರಿ,, ಹಸಿವಾದಾಗ ಹಣ್ಣು ಹಂಪಲುಗಳನ್ನು ತಿನ್ನುವಿರಿ, ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಮರಗಳ ಆಶ್ರಯ ಹುಡುಕುವಿರಿ, ತಮ್ಮ ಗೆಳೆಯರ ಜೊತೆಗೆ ಊರಿನ ನದಿ, ಕೆರೆಯಲ್ಲಿ ಈಜಾಡಲು ಹೋಗುವಿರಿ, ಮಣ್ಣಿನಲ್ಲಿ ಆಟವಾಡುವಿರಿ ತಾನೇ ಎಂದಾಗ ಮಕ್ಕಳೆಲ್ಲ ಹೌದು ತಾತ ಎಂದರು.
ತಾತ ನೋಡಿ ಮಕ್ಕಳೇ ಕಾಲಕಾಲಕ್ಕೆ ಮಳೆ ಬರಲು, ಮಣ್ಣಿನ ಸವಕಳಿ ತಡೆಗಟ್ಟಲು, ಅಂತರ್ಜಲ ಮಟ್ಟ ಹೆಚ್ಚಿಸಲು, ನಮಗೆಲ್ಲ ಶುದ್ಧ ಆಮ್ಲಜನಕ ದೊರೆಯಲು, ನಾವು ಮನೆ, ಶಾಲೆಯ ಪೀಠೋಪಕರಣ ತಯಾರಿಸಲು, ಅನೇಕ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಒದಗಿಸಲು, ವನ್ಯಜೀವಿಗಳೆಲ್ಲ ಜೀವನ ನಡೆಸಲು ಕಾಡುಗಳಿಂದ ಮಾತ್ರ ಸಾಧ್ಯ. ಕಾಡುಗಳನ್ನು ಸೃಷ್ಟಿಸಲು ನಾವು ಮರಗಿಡಗಳನ್ನು ಬೆಳೆಸಬೇಕು. ಈ ಮರಗಿಡಗಳನ್ನು ಬೆಳೆಸಲು ನಾವು ನೀವುಗಳು ಸೇರಿ ಮಾಡಿರುವ ಬೀಜದುಂಡೆಗಳನ್ನು ಊರಿನ ಬೆಟ್ಟದಲ್ಲಿ, ಊರಿನ ರಸ್ತೆಗಳ ಅಕ್ಕಪಕ್ಕದಲ್ಲಿ ಸಣ್ಣ ಸಣ್ಣ ಗುಂಡಿಗಳನ್ನು ತೆಗೆದು ಹಾಕೋಣ. ಮಳೆಗಾಲ ಬಂದಾಗ ಬೀಜಗಳು ಬೆಳೆದು ಮರವಾಗಿ ನಮಗೆಲ್ಲ ನೆರವಾಗುತ್ತವೆ.
ಬನ್ನಿ ಮಕ್ಕಳೇ ನಾವುಗಳಿಂದ ಮಾಡುವ ಈ ಸಣ್ಣ ಕಾರ್ಯವು ಭವಿಷ್ಯದಲ್ಲಿ ನಮ್ಮವರಿಗೆ ಫಲ ನೀಡುತ್ತದೆ. ಆದರಿಂದ ನಮ್ಮವರ ಭವಿಷ್ಯ ನಮ್ಮ ಕೈಯಲ್ಲಿದೆಂದು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಬನ್ನಿ ಬೀಜದುಂಡೆಗಳನ್ನು ಮತ್ತಷ್ಟು ಮಾಡೋಣ, ಮರಗಿಡಗಳ ಬೆಳೆಸೋಣ, ಪರಿಸರ ಸಂರಕ್ಷಣೆಗೆ ಮುಂದಾಗೋಣ ಎಂದು ತಾತ ಹೇಳಿದರು.
-ಶಿವಮೂರ್ತಿ.ಹೆಚ್., ದಾವಣಗೆರೆ.
ಉತ್ತಮ ಸಂದೇಶವುಳ್ಳ ಬರಹ
ಧನ್ಯವಾದಗಳು ಮೇಡಂ
ಉತ್ತಮ… ಸಂದೇಶ ಹೊತ್ತ ಬರಹ.
ಧನ್ಯವಾದಗಳು ಸಾರ್.
ಮಕ್ಕಳಿಗೆ ಪರಿಸರ ಕಾಳಜಿಯ ಕುರಿತಾದ ಪ್ರಾಯೋಗಿಕ ಪಾಠ ಹೇಳಿದ ಪರಿ ಸೊಗಸಾಗಿದೆ.
ಧನ್ಯವಾದಗಳು ಮೇಡಂ
ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು, ಕಾಳಜಿ ಮೂಡಿಸಬಲ್ಲ ತಾತನ ಉದಾತ್ತ ನಡೆಯು ಎಲ್ಲರಿಗೂ ಉತ್ತಮ ಸಂದೇಶವನ್ನು ನೀಡಿದೆ.
ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ