ಪೊದರ್ಹೊದರ ಮೆತ್ತೆಯಲ್ಲಿ…..
ಎಡೆಬಿಡದೆ ಸುರಿವ ಮಳೆಗೆ
ಜೀವ ನೆನೆದಿದೆ ನೋಡಿಲ್ಲಿ…!
ನಿನ್ನ ನೆನಪ ಹನಿಗಳಲ್ಲಿ…
ಒಲವೆನುವ ಬನಿಯ ಚೆಲ್ಲಿ…!!
ನಿನ್ನುಸಿರ ಪದಗಳೆದೆಯ
ಮೋಡ ಮೆತ್ತೆಯಲ್ಲಿ..
ನಿನ್ಹಸಿರ ನಗುವ ಮೊಗದ
ಇಂದ್ರಛಾಪದಲ್ಲಿ..!!
ಕನಸೆನುವ ಇಬ್ಬನಿಯ ಪನಿಯು
ನನ್ನೆದೆಯ ಹಾಸ ಮೇಲೆ..!
ಜೋಪಡಿಯ ಜಾರಿನಲ್ಲಿ
ಸುರಿಹರಿವ ನೀರಿನಲ್ಲಿ
ಬೊಗಸೆ ಪ್ರೀತಿ ಕೂಡಿ
ಕಿರುನಗೆಯು ಹೊದಿಕೆ..
ಮೆದುಮನದ ಪುಳಕ ಜಳಕ
ಬರಿದೆ ಒಲುಮೆ ಬೇಡಿಕೆ..
ಮೊಗೆಮೊಗೆದು ಉಣುವ
ಹಿಡಿಚಳಿಯ ನಡುಕ ಗುಟುಕ
ಇಳಿಸಂಜೆ ಹೊತ್ತಿನಲಿ..
ಮುದುರೊದರಿ ಮಲಗೋ
ವಿಹಗ ಮೃಗದಂತೆ
ಪೊದರ್ಹೊದರ ಮೆತ್ತೆಯಲ್ಲಿ…!!
–ಅರ್ಚನಾ ಎಚ್ , ಬೆಂಗಳೂರು
ಅರ್ಥಪೂರ್ಣ ವಾದ ಕವನ..ಸೊಗಸಾಗಿ ಮೂಡಿಬಂದಿದೆ…
ಧನ್ಯವಾದಗಳು ಮೇಡಮ್
ಬಹಳ ಚೆನ್ನಾಗಿದೆ ಕವನ
ಧನ್ಯವಾದಗಳು ಮೇಡಮ್
ಅರ್ಥಪೂರ್ಣ ಕವನ. ಮನ ಮಿಡಿದಿದೆ…ಧನ್ಯವಾದಗಳು
ಧನ್ಯವಾದಗಳು ಸರ್
ಚಂದದ ಪ್ರಕೃತಿ ವರ್ಣನೆಯಿಂದೊಡಗೂಡಿದ ಸುಂದರ ಕವಿತೆ
ಧನ್ಯವಾದಗಳು ಮೇಡಮ್
ಪ್ರಕೃತಿ ಮಡಿಲಿನಲ್ಲಿ ನಲಿದಾಡಿದೆ ಈ ಸುಂದರ ಕವನ…
ತುಂಬ ಚೆಂದದ ಕವನ
Thk u…