ಮತ್ತೆ ಬಂದಿದೆ ಯುಗಾದಿ….ಶುಭಾಶಯಗಳು
ಋತುಗಳು ಜಾರಿ ಕಾಲಚಕ್ರದಲ್ಲಿ
ತಂದಿದೆ ಚೈತ್ರಮಾಸವ ಚಿಗುರೆಲೆಯಲಿ
ಬಣ್ಣಗಳು ಶೃಂಗರಿಸಿದ ವೈವಿದ್ಯತೆಯಲಿ
ತಂದಿದೆ ಹೊಸ ವರುಷವ ಲೋಕದಲಿ
ಯುಗಾದಿಯ ಸಡಗರ ಸಂಭ್ರಮದಲ್ಲಿ
ನಲಿದಿದೆ ಕಾಲವು ಪುನರ್ಜ್ಜೀವನದಲ್ಲಿ
ಯುಗಾದಿಯ ಸಡಗರ ಸಂಭ್ರಮದಲ್ಲಿ
ಆನಂದಿಸಿದೆ ಕಾಲವು ನವೀನತೆಯಲಿ
ಹರಿದಿದೆ ಜಗದಲಿ ಹರುಷದ ಹೊನಲು
ಮೆರಗಿದೆ ಚೆಲುವಲಿ ಹೂದೋಟದ ಮಡಿಲು
ಕುಣಿದಿದೆ ಲೋಕವು ಕೋಗಿಲೆ ಹಾಡಲು
ಧ್ವನಿಸಿದೆ ನಾದವು ಪ್ರಕೃತಿಯು ನಗಲು
ಯುಗಾದಿ ಸಡಗರ ಸಂಭ್ರಮದಲ್ಲಿ
ಸಾಕಾರವಾಗಿದೆ ಕಾಲವು ಉಲ್ಲಾಸದಲ್ಲಿ
ಯುಗಾದಿ ಸಡಗರ ಸಂಭ್ರಮದಲ್ಲಿ
ಜೀವಂತವಾಗಿದೆ ಕಾಲವು ಉತ್ಸಾಹದಲ್ಲಿ
ಹಸಿರು ತೋರಣಗಳು ಅಲಂಕರಿಸಿದೆ ಹೊಸ ದಿನವ
ಹರಿಯುವ ತೊರೆಗಳು ನುಡಿಸಿದೆ ಹೊಸ ರಾಗವ
ಮಿಡಿಯುವ ಹೃದಯಗಳು ಬಯಸಿದೆ ಹೊಸ ಭಾವವ
ಕಲೆಸಿದೆ ಬಾಳು ಬದುಕು ಸಿಹಿ ಬೆಲ್ಲ ಕಹಿ ಬೇವ
-–ಮಿತ್ತೂರು ಎನ್. ರಾಮಪ್ರಸಾದ್
ಪ್ರಕೃತಿಯ ವಿವರ ಗಳನ್ನೊಳಗೊಂಡ ಸುಂದರ ಕವನ.
ಯುಗಾದಿಯ ಸಂಭ್ರಮ ಕ್ಕೆ ಕಟ್ಟಿ ರುವ ಕವನ ದ ತೋರಣ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸಾರ್
ಯುಗಾದಿ ಸಂಭ್ರಮವು ತುಂಬಿ ಹರಿಯುವ ಭಾವಪೂರ್ಣ ಕವನ.
ಚೈತ್ರ ಮಾಸದ ಸೊಗಡನ್ನು ಎಷ್ಟು ಬಣ್ಣಿಸಿದರೂ ಸಾಲದು. ಸುಂದರ ಕವಿತೆಗಾಗಿ ಅಭಿನಂದನೆಗಳು