ಕವಿತೆ ಎಂಬ ಮೂಡಣ, ಪಡುವಣ
ಕವಿತೆಯೆoಬುದು ಮನದ ರಿಂಗಣ
ಬದುಕ ನುಸುಲಿನ ಹೂರಣ..
ಮಿಡತೆ ಚಿಟ್ಟೆಯದಾಗಿ ಹಾರುವ
ಭಾವ ಯಾನದ ಚಿತ್ರಣ..
ನೋವು ನಲಿವಿನ ಪಾಕ ಕವಿತೆಗೆ
ಸೋಲು ಗೆಲುವೂ ಕಾರಣ..
ಅಮ್ಮನಪ್ಪುಗೆ ಕಂದನೆಳೆತ
ಸಿಹಿಯು ಕಹಿಯ ಮಿಶ್ರಣ..
ತಿಮಿರ ಕವಿದಿಹ ಭಾವ ಜೀವಿಗೆ
ಬೆಳಕನುದಿಸುವ ಮೂಡಣ..
ಬೆಂದು ಬಳಲಿದ ಕರ್ಮಚಾರಿಗೆ
ತಂಪ ನೀಡುವ ಪಡುವಣ..
–ವಿದ್ಯಾಶ್ರೀ ಅಡೂರ್, ಮುಂಡಾಜೆ
ಬ್ಯೂಟಿಫುಲ್
ಧನ್ಯವಾದಗಳು
ಕವಿತೆಯ ಮಗ್ಗುಲುಗಳನ್ನು ಸರಳವಾಗಿ ಪ್ರಚುರಪಡಸಿರುವ ಸೋದರಿ ನಿನಗೆ ಅಭಿನಂದನೆಗಳು.
ತುಂಬಾನೆ ಚೆನ್ನಾಗಿದೆ ಪದಗಳ ಜೋಡಣೆ ನನಗೆ ತುಂಬಾ ಇಷ್ಟವಾಯಿತು ನಿಮ್ಮ ಬರಹಗಳು
ಧನ್ಯವಾದಗಳು ಅಕ್ಕಾ
ಸೊಗಸಾದ ಭಾವಯಾನ.
ಕವಿತೆ ಚೆನ್ನಾಗಿದೆ….
ಪದಗಳ ಸೌಂದರ್ಯವು ಕವನಗಳ ಮಾದುರ್ಯವು/
ಪದಗಳ ಸೌಂದರ್ಯವು ಕವನಗಳ ಮಾದುರ್ಯವು/
ಭಾವನೆಗಳ ಕಾರಂಜಿಸುವ ಅಪರಿಮಿತ ಮಾಧ್ಯಮವು/
ಪದಗಳ ಸೌಂದರ್ಯವು ಕವನಗಳ ಮಾದುರ್ಯವು/
ಕಲ್ಪನೆಗಳ ಸ್ಪೂರ್ತಿಸುವ ಇತಿಮಿತಿಯಿಲ್ಲದ ಸಾಗರವು/
ಯಥಾರ್ಥ ತೋರುವ ನವರಸಗಳ ಮೆರೆಸುವ ನಡುವಣವು/
ಭಾವನೆಗಳ ಕ್ರಮಗೊಳಿಸುವ ಗಮನ ಸೆಳೆಯುವ ಆಕರ್ಷವು/
ವಾಸ್ತವಿಕವ ವಿಸ್ತರಿಸಿ ವೈವಿಧ್ಯತೆಯಲಿ ರೂಪಿಸುವ ವಾಹಕವು/
ಬಗೆಯೆಣಿಕೆಗಳ ಶೈಲಿಯಲಿ ಪ್ರದರ್ಶಿಸುವ ಕಲ್ಪನೆಯ ಕಂದರವು/
ಕವಿತೆಯು ಬಾಳು ಬದುಕಿನ ಪ್ರಸಂಗಗಳ ತೋರುವ ದರ್ಪಣವು/
ತುಯಿತದಲಿ ಪದಗಳ ಚಿತ್ತಾರದಲ್ಲಿ ಪೋಣಿಸಿರುವ ಪದಗುಚ್ಛವು/
ಕವಿತೆಯು ಜೀವನದ ಆಗುಹೋಗುಗಳಲ್ಲಿ ಬೆರೆದಿರುವ ಸಾಕಾರವು/
ಕವಿಯ ವಿನ್ಯಾಸದ ಕಲ್ಪನೆಯಲ್ಲಿ ಮೂಡಿ ಬಂದಿರುವ ಪುಷ್ಪಗುಚ್ಚವು/
ತುಂಬಾ ಧನ್ಯವಾದಗಳು ಸರ್
ಭಾವಯಾನದಲ್ಲಿ ಕವಿತೆ ಸೊಗಸಾಗಿ ಮಿಂದೆದ್ದಿದೆ.
ನನ್ನ ಕವಿತೆ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು
ಅಕ್ಕನ ಕವನ ಎಂದಿನಂತೆ ಅದ್ಭುತ…