”ಲಕ್ಷ್ಮಣ ರೇಖೆ”
ಸೀತೆಗೆಂದು ಎಳೆದನು
ಲಕ್ಷ್ಮಣನೊಂದು ರೇಖೆ
ರಕ್ಷಣೆಗೆಂದು….
ಮರೆತು ದಾಟಿದ
ತಪ್ಪಿಗೆ …ಆಯಿತು
ರಾಮಾಯಣ…..
ಇಂದು
ನಾವೇ ಹಾಕಿಕೊಳ್ಳಬೇಕು
ನಮ್ಮೊಳಗೊಂದು ರೇಖೆ,
ನಮ್ಮನ್ನಾಳುವ ಅಹಂಕಾರಕ್ಕೆ
ಗೆರೆ ಹಾಕಿ…..
ಹೊರ ಬರದಂತೆ…
ರೇಖೆ ದಾಟದಂತೆ…
ನಮ್ಮ ಸಂತೋಷಗಳ ಶತೃ
ಅಸೂಯೆ ಅತೃಪ್ತಿ ದುರಾಸೆಗೆ
ನಾವೇ ಹಾಕಬೇಕು ರೇಖೆಯೊಂದನು
ಒಳಗೆ ಇರುವಂತೆ…
ಹೊರಬಂದು….
ಕಲಕಿ ರಾಡಿಗೊಳಿಸದಿರಲೆಂದು…
ನಮ್ಮೊಳಗೆ ನಾವೇ
ಹಾಕಿಕೊಳ್ಳಬೇಕು
“ಲಕ್ಷ್ಮಣ ರೇಖೆ”
ಒಳಿತು ಕೆಡಕುಗಳ ನಡುವೆ…..
-ವಿದ್ಯಾ ವೆಂಕಟೇಶ್. ಮೈಸೂರು
ಸೊಗಸಾಗಿದೆ ಕವನ
ಸರಳ ಸುಂದರ ಕವನ ಚೆನ್ನಾಗಿದೆ ಸೋದರಿ . ಅರ್ಥಪೂರ್ಣ ವಾದ ಸಂದೇಶ ನೀಡಿದೆ.
“ನಮ್ಮೊಳಗೆ ನಾವೇ ಹಾಕಿಕೊಳ್ಳಬೇಕು “ಲಕ್ಷ್ಮಣ ರೇಖೆ” ಒಳಿತು ಕೆಡಕುಗಳ ನಡುವೆ….. ” ಈ ಸಾಲು ಸಾರ್ವಕಾಲಿಕ ಸತ್ಯ. ಕವನ ಬಹಳ ಇಷ್ಟವಾಯಿತು.
ಚಂದದ ಕವನ…ನಾವು ಎಲ್ಲೆಲ್ಲಿ ಲಕ್ಷ್ಮಣ ರೇಖೆಯನ್ನು ಹಾಕಬೇಕೆಂಬುದನ್ನು ಮನಮುಟ್ಟುವಂತೆ ಬಿಡಿಸಿಟ್ಟಿದೆ.
ಎಷ್ಟು ಒಳ್ಳೆಯ ಪದ್ಯ.