ಬೆಳಕು-ಬಳ್ಳಿ

“ಗುರುತು”

Share Button

ಮನೆಯ ಮಹಾಲಕ್ಷ್ಮಿ ನೀನು
ಎನ್ನುತ್ತಾನೆ ಗಂಡ
ಪಾಪ ಮರತೇ ಬಿಡುತ್ತಾಳೆಮನೆಯ ಕಸ ಗುಡಿಸುವುದರಲ್ಲೇ
ಬದುಕು ಕಳೆದಿದ್ದು,,,

ಮನದ ಮಹಾರಾಣಿ ನೀನು
ಎನ್ನುತ್ತಾನೆ ಗಂಡ
ಪಾಪಾ ನೆನಪಾಗುವುದಿಲ್ಲ ಅವಳಿಗೆ
ಸಂಸಾರ ಸಾಗರದಲ್ಲಿ
ಮುಳುಗಿದವಳಿಗೆ
ವಯಸ್ಸು ಕಳೆದಿದ್ದು…

ನೆನಪಾದಾಗ,,
ಕನ್ನಡಿಯಲ್ಲಿ
ನೋಡಿಕೊಂಡಾಗ
ಅವಳ ಗುರುತು
ಅವಳಿಗೇ ಹತ್ತಲಿಲ್ಲ….

*ವಿದ್ಯಾ ವೆಂಕಟೇಶ್. ಮೈಸೂರು

10 Comments on ““ಗುರುತು”

  1. ಹೌದು ಹೌದು ಇದು ಹೆಣ್ಣಿಗೆ ಮಾತ್ರ ಅರ್ಥವಾಗುವಂತಹ ಕವನ
    ಬೇರೆಯವರು ಹೆಣ್ಣನ್ನು ಲೇವಡಿ ಮಾಡುವವರು

  2. ಚುಟುಕಾದರೂ ಚುರುಕು ಮುಟ್ಟಿಸುವಂತಿದೆ..ಕವನ
    ಸೋದರಿ . ಅಭಿನಂದನೆಗಳು

  3. ತಮ್ಮ ಗುರುತು ತಮಗೇ ಸಿಗದಂತಹ ಪರಿಸ್ಥಿತಿಯಲ್ಲಿ ಜೀವನ ಕಳೆಯುವ ಮಹಿಳೆಯ ಬಾಳಿನ ಕ್ರೂರಸತ್ಯದ ಅನಾವರಣ!… ಸೊಗಸಾದ ಕವನ.

  4. ತನ್ನ ಕುಟುಂಬದವರ ಗುರುತನ್ನು ಗಾಢವಾಗಿಸುವ ನಿಟ್ಟಿನಲ್ಲಿ ತನ್ನ ಗುರುತನ್ನು ತಾನೇ ಮಸಕು ಮಾಡಿಕೊಂಡು ಬಿಡುವ ಹೆಣ್ಣನ್ನು ನೀವಾದರೂ ಗುರುತಿಸಿದ್ದು ಸಂತೋಷ ತಂದಿದೆ. ಚಂದದ ಕವನಕ್ಕಾಗಿ ಅಭಿನಂದನೆಗಳು

  5. ಎಲ್ಲರ ಮೆಚ್ಚುಗೆಗೆ,, ಅವರವರ ಭಾವಗಳ ಪ್ರತಿಕ್ರಿಯೆ ಗೆ
    ಹೃದಯ ಪೂರ್ವಕ ಧನ್ಯವಾದ ಗಳು

Leave a Reply to ವಿದ್ಯಾ Cancel reply

 Click this button or press Ctrl+G to toggle between Kannada and English

Your email address will not be published. Required fields are marked *