ಹನಿಯಿಂದ ಹನಿಗೆ
ಪುಟ್ಟ ನೀರಿನ ಹನಿ ನಾನು ಮಳೆಯಾಗಿ ಇಳೆಗೆ ಇಳಿದಿರುವೆ
ನನ್ಙಂತ ಅನೇಕ ಕಣಗಳ ಜೊತೆ ಸೇರಿ ಹಳ್ಳ ತೊರೆಯಾಗಿ ಹರಿದಿರುವೆ
ನಾ ನಡೆದ ಹಾದಿಯನು ಮೆತ್ತಗಾಗಿಸಿ ಹಸಿರ ತುಂಬಿರುವೆ
ನನ್ನ ನೋಡಿದ ರೈತನ ಮುಖದಲಿ ಹರುಷ ತಂದಿರುವೆ
ಬಾಯಾರಿದ ಜೀವಗಳಿಗೆ ಅಮೃತ ಸಿಂಚನವಾಗಿರುವೆ
ಮರಗಿಡಗಳ ಎಲೆಗಳನ್ನು ಸ್ವಚ್ಛವಾಗಿ ತೊಳೆದಿರುವೆ
ಬೇರುಗಳಿಗೆ ಪೋಷಣೆಭರಿತ ಜೀವಜಲ ನೀಡಿರುವೆ
ಕೆರೆ ಕೊಳ್ಳಗಳ ತುಂಬಿಸಿ ಜಲಚರಗಳಿಗೆ ಆಧಾರವಾಗಿರುವೆ
ಓಡುವ ನದಿಯಲ್ಲಿ ಕೆಂಬಣ್ಣಕೆ ತಿರುಗಿ ಊರೂರುಗಳ ಉದ್ಧಾರ ಮಾಡಿರುವೆ
ಚಿಕ್ಕ ಹನಿಯೆಂದು ಎನ್ನ ಜರಿಯದಿರಿ ವಿಶಾಲ ಶರಧಿಯ ಭಾಗವು ನಾನು
ಮತ್ತೆ ಬಾಷ್ಪೀಕರಣದಿಂದ ಮೇಲೆರುತಾ ಜಲ ಚಕ್ರಕೆ ಕಾರಣವಾಗಿರುವೆನು
ಮರಳಿ ಹನಿಯಾಗಲು ಕಪ್ಪು ಮೋಡಗಳಾಗಿ ಭುವಿಯ ಕವಿದಿರುವೆನು
– ಕೆ.ಎಂ ಶರಣಬಸವೇಶ
ಸೊಗಸಾಗಿದೆ ಕವನ.
ಉತ್ತಮ ವಾಗಿದೆ
ಅರ್ಥಪೂರ್ಣ ವಾದ ಕವನ ಅಭಿನಂದನೆಗಳು ಸಾರ್.
ತುಂಬಾ ಚೆನ್ನಾಗಿದೆ….
ಹನಿ ಹನಿಗೂಡಿದರೆ ಹಳ್ಳ ಎಂಬ ನಾಣ್ನುಡಿಗೆ ಪೂರಕವಾದ ಹನಿಯ ಮನದಾಳದ ನುಡಿಮುತ್ತುಗಳು ಚಂದಿವೆ
ಜೀವಜಲ…ನೀರಹನಿಯ ಜೀವನಚಕ್ರವನ್ನು ಬಹು ಸೊಗಸಾಗಿ ಹಿಡಿದಿಟ್ಟ ಕವನ!