ಕರುನಾಡ ಮನೆಮನದ ಹಬ್ಬ..
ವಿಜಯನಗರ ಅರಸರ ಕಾಲದ ನವಮಿ ದಿಬ್ಬವು
ಮೈಸೂರ ರಾಜ ಒಡೆಯರ್ ಕಾಲದಿ ದಸರವು
ಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವು
ಕರುನಾಡ ಮನೆ ಮನಗಳಂಗಳದಿ ಸಡಗರವು.
ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿ
ಅಟ್ಟಹಾಸದಿ ಮೆರೆದ ಮಹಿಷಾಸುರನ ಸಂಹಾರಿ
ಕಪ್ಪು ಮಣ್ಣಿನ ಜನರ ಭಕ್ತಿಗೆ ಒಲಿದ ಮಹಾಮಾಯಿ
ಕನ್ನಡಿಗರ ಅನಾವರತ ಪೊರೆಯುವ ಕರುಣಾಮಯಿ.
ವಿಜಯ ದಶಮಿಯ ವೈಭವವ ಸವಿಯುವ ಕಾತುರ
ವಿಶ್ವದ ಮೂಲೆ ಮೂಲೆಯಿಂದ ಬರುವ ಜನಸಾಗರ
ಕಣ್ಮನಗಳ ಮೂಕ ವಿಸ್ಮಿತಗೊಸುವ ಸ್ತಬ್ಧ ಚಿತ್ರಗಳು
ಹೃನ್ಮನಗಳ ತಣಿಸುವ ಜನಪದ ಕಲಾ ತಂಡಗಳು.
ಬನ್ನಿ ಬನ್ನಿ ಮಂಟಪದ ಮುಂದೆ ನಾವೆಲ್ಲರೂ ಸೇರುವ
ಚಿನ್ನದ ಅಂಬಾರಿಯಲ್ಲಿಯ ಚಾಮುಂಡಿಯ ನೋಡುವ
ಜಂಬೂ ಸವಾರಿಯ ಗತ್ತಿನ ಗಮ್ಮತ್ತುನು ಸವಿಯುವ
ಜನರ ಬದುಕು ಹಸನಾಗಲೆಂದು ತಾಯಿಯ ಬೇಡುವ.
–ಶಿವಮೂರ್ತಿ.ಹೆಚ್.
ಪ್ರಸ್ತುತ ದಸರಾ ಹಬ್ಬದ ವೈಶಿಷ್ಟ್ಯ ತಿಳಿಸುವ ಕವನ ಸಹಜವಾಗಿ ಮೂಡಿ ಬಂದಿದೆ ಸಾರ್
ಧನ್ಯವಾದಗಳು ಮೇಡಂ
ಪೂರ್ತಿ ದಸರಾ ದ ಚಿತ್ರಣವನ್ನು ನೀಡುವ ಕವನ.
ಧನ್ಯವಾದಗಳು ಮೇಡಂ
ಮೈಸೂರು ದಸರಾ… ಎಷ್ಟೊಂದು ಸುಂದರಾ…!!! ನಮಗೂ ಅದರ ವೈಭವವನ್ನು ಭಾವಪೂರ್ಣವಾಗಿ , ಸೊಗಸಾಗಿ ತಿಳಿಸಿದಿರಿ, ಧನ್ಯವಾದಗಳು.
ದಸರಾ ದ ಚಿತ್ರಣ ಸಹಜವಾಗಿದೆ
ಈ ವರ್ಷ ದಸರಾ ಹಬ್ಬದ ವೈಭವವನ್ನು ಈ ರೀತಿಯ ಸುಂದರ ಕವಿತೆಗಳಿಂದಲೇ ಸವಿಯಬೇಕು. ಚಂದದ ಕವಿತೆ.
ಧನ್ಯವಾದಗಳು ಮೇಡಂ