ಜೀವನ
ಯಾರಿದ್ದರು
ಯಾರಿಲ್ಲದಿದ್ದರೂ
ಜೀವನ ಪಯಣ
ಸಾಗಲೇಬೇಕು.
ಸಂತಸವಿದ್ದರು
ಸೂತಕವಿದ್ದರು
ಜೀವನ ಒಲೆಯೂ
ಉರಿಯಲೇಬೇಕು.
ಗೆಲುವಿರಲಿ
ಸೋಲಿರಲಿ
ಜೀವನ ಆಟ
ಆಡಲೇಬೇಕು.
ಹಗಲಿರಲಿ
ಇರುಳಿರಲಿ
ಜೀವನ ಜ್ಯೋತಿ
ಬೆಳಗಲೇಬೇಕು.
ಅಧಿಕ ಲಾಭವೋ
ಅಧಿಕ ನಷ್ಟವೋ
ಜೀವನ ವ್ಯಾಪಾರ
ಮಾಡಲೇಬೇಕು.
ಮುನ್ನಡೆಯೋ
ಹಿನ್ನಡೆಯೋ
ಜೀವನ ಹೆಜ್ಜೆಯ
ಹಾಕಲೇಬೇಕು.
ಸುಖಾಂತವೋ
ದುಃಖಾಂತವೋ
ಜೀವನ ನಾಟಕವ
ಮುಗಿಸಲೇಬೇಕು.
-ಶಿವಮೂರ್ತಿ.ಹೆಚ್., ದಾವಣಗೆರೆ
ಹೌದು ಸತ್ಯಸ್ಥಸತ್ಯವಾದ ಮಾತುಗಳನ್ನು ಕವನದ ಮೂಲಕ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಸಾರ್.
ಧನ್ಯವಾದಗಳು ಮೇಡಂ
ಹೌದು, ಈ ಬದುಕಿನ ರಂಗಮಂಚದಲ್ಲಿ ಬಗೆ ಬಗೆಯ ವೇಷ ತೊಟ್ಟು ಸಾಗುತ್ತಿರಲೇ ಬೇಕು.
ಧನ್ಯವಾದಗಳು ಮೇಡಂ
ಬದುಕಿನ ಅನಿವಾರ್ಯತೆಗಳ ಕುರಿತಾದ ಕವನ ಕಟುಸತ್ಯಗಳ ಅನಾವರಣದಂತಿದೆ.
ಧನ್ಯವಾದಗಳು ಮೇಡಂ
ಜೀವನದ ಏರುಪೇರುಗಳನ್ನು ಸಹಜವಾಗಿ ಸಂಭಾಳಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆಯನ್ನು ಬಿಂಬಿಸಿದ ಸೊಗಸಾದ ಕವನ.
ಧನ್ಯವಾದಗಳು ಹಿರಿಯರೇ
ಸತ್ಯ
ಧನ್ಯವಾದಗಳು ಮೇಡಂ