ಜೀವಾಮೃತ
ಬಾ ಮಳೆಯೆ ಇಳೆಗಿಳಿಯೆ ನೀ ಮೆಲ್ಲನೆ l
ಹನಿ ಹನಿ ಸೇರಿ ಹೊಳೆಯಾಗಿ ಹರಿದು ಬಾ ನೀ ಸುಮ್ಮನೆ.
ಹರಿದು ಬಂದ ನೀರನುಂಡು ತಂಪದಾಗಲೇ
ಧರೆಯಲಿರುವ ಕಸವು ಕರಗಿ ಕಸುವಾದ ಈ
ಮೃತ್ತಿಕೆಯೊಳು ಸಸ್ಯಶಾಮಲೆ ಮತ್ತೆ ಕಣ್ತೆರೆವಳು
ಹರಿಯುವ ಈ ನೀರಿನ ಹನಿಹನಿಯು ಅಮೃತವು
ಅಮೃತದ ಈ ಹನಿಹನಿಯು ಜೀವಾಮೃತವು
ಜಲವೆ ಸಕಲ ಜೇವರಾಶಿಗು ಮೂಲ ಜೀವಸೇತು.
ಇಳೆಗಿಳಿಯುವ ಮಳೆ ಹನಿಗೆ ಕುಲ ಯಾವುದು ?
ಹರಿಯುವ ಜಲಧಿಗೆ ಬೆಡಗು ಅದಾವುದು ?
ಮೇಲೇರುತಿಹ ನೀರಾವಿಗ್ಯಾವ ಜಾತಿಯೋ ?
ಮಣ್ಣಿನ ಆಳಕ್ಕಿಳಿದ ಜಲವದು ಅಂತರ್ಜಲವಾಯ್ತು
ಭುವಿಯ ಮೇಲರಿಯುವ ನೀರದು ಜೀವರಾಶಿಗುಪಕಾರಿಯಾಯ್ತು
ಧ್ರುವಪ್ರದೇಶದ ಜಲಧಿಯದು ಘನೀಕರಣವಾಯ್ತು.
– ನಾಗರಾಜ್ ಕಾಳೆ
ಉತ್ತಮ ಸಂದೇಶವನ್ನು ಸಾರುವ ಕವನ ಸುಂದರ ವಾಗಿದೆ ಮೂಡಿ ಬಂದಿದೆ ಅಭಿನಂದನೆಗಳು ಸಾರ್
ಇಳೆಯ ಜೀವ ಮಳೆಯ ಸೊಗಸಾದ ವರ್ಣನೆ.
ಸುಂದರವಾದ ಕವನ.
ಸುಂದರ ಕವನ ಸರ್
ಇಳೆಯ ಕೊಳೆ ತೊಳೆವ ಮಳೆ ಕಳೆ ತರಿಸುವ ಮಳೆ ಬಗ್ಗೆ ಸೊಗಸಾದ ಕವನ
ಸುಜಾತಾ ರವೀಶ್
ಜೀವಜಲದ ವಿವಿಧ ಆಯಾಮಗಳ ಬಗೆಗಿನ ಕವನ ಸೊಗಸಾಗಿದೆ.
ನಿಜ, ಜಲವೆ ಸಕಲ ಜೇವರಾಶಿಗು ಮೂಲ ಜೀವಸೇತು!