ಬೆಳಕು-ಬಳ್ಳಿ

ಎಲ್ಲರೊಳು ಇದೆ ಕವನ

Share Button

ಬರೆಯುವ ಕೈಗಳಿಗೆ ಬಿಡುವಿಲ್ಲ
ಬಿಡುವಿರುವ ಕೈಗಳು ಬರೆಯೋಲ್ಲ
ಎಂದು ಅಂದುಕೊಂಡರೆ
ಅದು ಸರಿಯಲ್ಲದ ತನ
ಇರುವ ಸಮಯದಲಿ
ಮನದೊಳನಿಸದನು
ತಿಳಿಯ ಭಾವದಲಿ
ಬಿಳಿಯ ಹಾಳೆಯಲ್ಲಿ
ಗೀಚಿದರದುವೆ ಕವನ.

ಹೂವಿಗದು ಮಾತ್ರವೇ
ಘಮನ ?
ಊರ ಜಾತ್ರೆಯಲಿ
ತೇರನೆಳೆಯುತಿರೆ
ಘಮ ಘಮಿಸುವುದಿಲ್ಲವೇ
ಜವನ?
ಒಣಗಿದ ಒಡಲ ಬಾವಿಗಳ
ಮುಚ್ಚಿಹ ಜಲದಕಣ್ಣುಗಳ
ತೆರೆದು ಹರಿಸಬಹುದಲ್ಲವೆ
ಜೀವ ಸೆಲೆಯನ್ನ!

ಯಾರೂ ಅರಿಯದ್ದು
ಅದೇನಲ್ಲ ಈ ಜೀವನ
ಬೆಳೆವ ಹಾದಿಯಲಿ
ಪಡೆದ ಅನುಭವಗಳನ್ನ
ಅಕ್ಷರದ ಅರ್ಥಗಳ
ಸಾಲುಗಳ ಮಾಡಿದರದುವೆ
ಕವನ

ಹೇಗೆಂದರೆ ಹೂವಿಗದು
ಮಾತ್ರವೇ ಘಮನ ?
ಊರಿನ ಜಾತ್ರೆಯಲಿ
ತೇರನೆಳೆಯುತಿರೆ
ಘಮಘಮಿಸುವುದಿಲ್ಲವೇ
ಜವನ ?

-ನಟೇಶ

7 Comments on “ಎಲ್ಲರೊಳು ಇದೆ ಕವನ

  1. ಕವನ ರಚನೆಗೆ ಆತ್ಮ ವಿಶ್ವಾಸ ತುಂಬುವ ಚಂದದ ಸೃಜನಾತ್ಮಕ ಕವನ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *