ಎಲ್ಲರೊಳು ಇದೆ ಕವನ
ಬರೆಯುವ ಕೈಗಳಿಗೆ ಬಿಡುವಿಲ್ಲ
ಬಿಡುವಿರುವ ಕೈಗಳು ಬರೆಯೋಲ್ಲ
ಎಂದು ಅಂದುಕೊಂಡರೆ
ಅದು ಸರಿಯಲ್ಲದ ತನ
ಇರುವ ಸಮಯದಲಿ
ಮನದೊಳನಿಸದನು
ತಿಳಿಯ ಭಾವದಲಿ
ಬಿಳಿಯ ಹಾಳೆಯಲ್ಲಿ
ಗೀಚಿದರದುವೆ ಕವನ.
ಹೂವಿಗದು ಮಾತ್ರವೇ
ಘಮನ ?
ಊರ ಜಾತ್ರೆಯಲಿ
ತೇರನೆಳೆಯುತಿರೆ
ಘಮ ಘಮಿಸುವುದಿಲ್ಲವೇ
ಜವನ?
ಒಣಗಿದ ಒಡಲ ಬಾವಿಗಳ
ಮುಚ್ಚಿಹ ಜಲದಕಣ್ಣುಗಳ
ತೆರೆದು ಹರಿಸಬಹುದಲ್ಲವೆ
ಜೀವ ಸೆಲೆಯನ್ನ!
ಯಾರೂ ಅರಿಯದ್ದು
ಅದೇನಲ್ಲ ಈ ಜೀವನ
ಬೆಳೆವ ಹಾದಿಯಲಿ
ಪಡೆದ ಅನುಭವಗಳನ್ನ
ಅಕ್ಷರದ ಅರ್ಥಗಳ
ಸಾಲುಗಳ ಮಾಡಿದರದುವೆ
ಕವನ
ಹೇಗೆಂದರೆ ಹೂವಿಗದು
ಮಾತ್ರವೇ ಘಮನ ?
ಊರಿನ ಜಾತ್ರೆಯಲಿ
ತೇರನೆಳೆಯುತಿರೆ
ಘಮಘಮಿಸುವುದಿಲ್ಲವೇ
ಜವನ ?
-ನಟೇಶ
ಸರಳ ಸುಂದರ ಕವನ ಚೆನ್ನಾಗಿದೆ ಸಾರ್
ವಂದನೆಗಳು ಮೇಡಮ್
ಸುಂದರವಾಗಿದೆ
ವಂದನೆಗಳು ಮೇಡಮ್
ಕವನ ರಚನೆಗೆ ಆತ್ಮ ವಿಶ್ವಾಸ ತುಂಬುವ ಚಂದದ ಸೃಜನಾತ್ಮಕ ಕವನ.
ಸುಂದರ ಭಾವಪೂರ್ಣ ಕವನ ಸರ್…ಧನ್ಯವಾದಗಳು.
ಚೆಂದದ ಕವನ.