“ಶುದ್ಧ”
ಓ ಪ್ರವಾಹವೇ
ಆಸ್ತಿ ಪಾಸ್ತಿ
ಮನೆ ಮಾರು
ಮಕ್ಕಳು ಮುದುಕರೆನ್ನದೆ
ಕೊಚ್ಚಿಕೊಂಡು ಹೋದೆ,,
ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆ
ಉಳಿದವರಲ್ಲಿ ಉಳಿಸಿ ಹೋದೆ
ನಾನು ನನ್ನದೆಂಬ ಮೋಹಗಳನ್ನು,,,
ಕೊಚ್ಚಿ ಹೋಗಲಿಲ್ಲವೇಕೆ
ಅಹಂ,ಅಸೂಯೆ, ದುರಾಸೆಗಳು,,,,
ಓ ಪ್ರವಾಹವೇ
ನೀನು ಸೋತು ಹೋದೆಯಾ
ಮನಸುಗಳ ಶುದ್ಧ ಮಾಡುವುದರಲ್ಲಿ
ಅಥವಾ
ಪ್ರವಾಹದ ನೀರು ಸಾಲಾದಾಯಿತೆ
ಮನಸ್ಸುಗಳ ತೊಳೆದು
ಶುದ್ಧ ಮಾಡುವುದಕ್ಕೆ !
–ವಿದ್ಯಾ ವೆಂಕಟೇಶ. ಮೈಸೂರು
ಪ್ರವಾಹದಿಂದ ಮನಸ್ಸು ಕೊಚ್ಚಿ ತೊಲಗದೆ ಬಿಟ್ಟು ಸಾಗಿದೆ. ಕವನ ಚೆನ್ನಾಗಿದೆ. ಧನ್ಯವಾದಗಳು
Super
ಅರ್ಥಪೂರ್ಣ ವಾದ ಕವನ ಸೋದರಿ ಚೆನ್ನಾಗಿದೆ.
ಯಾವ ಪ್ರವಾಹಕ್ಕೂ ಮನುಷ್ಯನ ಮಲಿನತೆ ತೊಳೆಯುವ
ಸಾಮರ್ಥ್ಯ ವಿಲ್ಲವೆಂಬ ಮಾರ್ಮಿಕ ಕವನ ನೈಜವಾಗಿದೆ..
ಹೌದು, ಅಹಂ, ಅಸೂಯೆಗಳ ಕೊಳೆ ತೊಳೆದು, ಶುದ್ಧ ವಾಗಬೇಕಿದೆ ಅಂತಃಕರಣ.
ಪ್ರವಾಹದಿಂದ ಅನಾಹುತವಲ್ಲದೆ ಬೇರೇನು ಸಾಧ್ಯ? ವಿವೇಕವೆಂಬ ತಿಳಿನೀರ ಝರಿಂದಷ್ಟೇ ಮನದ ಮಲಿನವ ತೊಳೆಯಬಹುದು. ಸುಂದರ ಕವನ
ಮನದ ಮಲಿನವನ್ನು ತೊಳೆದು ಶುದ್ಧಗೊಳಿಸುವ ಪ್ರವಾಹಕ್ಕಾಗಿ ಹಾತೊರೆದಿದ್ದಾರೆ ಕವಯಿತ್ರಿ ವಿದ್ಯಾ ಮೇಡಂ ಅವರು.. ಸುಂದರ ಪರಿಕಲ್ಪನೆ ನೆನಸಾಗಲಿ..