ಅನ್ನದಾತ
ಅನ್ನ ನೀಡುವ ಕೈ ಅದು ಎಂದೂ ಸೋಲದು l
ಅನ್ನ ಬೇಡುವ ಕೈ ಅದು ಎಂದೂ ಹರಸುವುದು ll
ಹೇ ತಾಯಿ ಅನ್ನಪೂರ್ಣೇಶ್ವರಿಯೇ
ನಿನ್ನ ಅನುಗ್ರಹವಿಲ್ಲದೆ ಅದ್ಯಾವ
ಜೀವಿ ತಾನೆ ಬದುಕುಳಿಯಬಲ್ಲದು ?
ಪ್ರತಿ ಅಗಳಿನಲ್ಲು ತಿನ್ನೋರ ಹೆಸರು ಬರೆದಿರಬಹುದು
ಅನ್ನವೆ ದೈವ ಅದುವೆ ಪರಬ್ರಹ್ಮ !
ಅನ್ನವಿಕ್ಕುವಾತನೇ ಪ್ರತ್ಯಕ್ಷ ದೈವ ನಮಗೆಲ್ಲಾ !
ಪಂಚಭೂತವನೆ ದೈವವೆಂದು ಭಾವಿಸಿ
ಪರಿ ಪರಿಯಾಗಿ ಆರಾಧಿಸುವ ಅನ್ನದಾತನು
ಪ್ರಾಣಿಪ್ರಿಯನು ಹೌದು ! ಪ್ರಕೃತಿ ಪ್ರಿಯನು ಹೌದು !
ಜೀವ ಜಗತ್ತಿಗೆ ಅನ್ನವಿಕ್ಕುವಾತನೆ
ಭೂಮಾತೆಯ ನಿಷ್ಠಾವಂತ ಸೇವಕ
ಜನಾನುರಾಗಿ ಈ ಅನ್ನದಾತನೊಬ್ಬನೆ
ಬಿತ್ತಿದ ಒಂದೊಂದು ಬಿತ್ತವು ಸಸಿಯಾಗಿ
ಬಿಟ್ಟ ಫಲವದು ರಾಶಿ ರಾಶಿ ಧಾನ್ಯವಾಗಿ
ಅನ್ನಧಾತನನು ಹಾರೈಸಿದಳು ವಸುಧೆ ತಾಯಿಯಾಗಿ.
–ನಾಗರಾಜ್ ಕಾಳೆ (SKIN).
ಚೆನ್ನಾಗಿದೆ ಕವನ. ಧನ್ಯವಾದಗಳು
Fine
ವಾವ್ ಸತ್ಯಸ್ಥಸತ್ಯವಾದ ಮಾತುಗಳು ಕವನರೂಪದಲ್ಲಿ ಪಡಿಮೂಡಿಸಿರುವ ರೀತಿ ಚೆನ್ನಾಗಿದೆ ಸರ್
ಸೂಪರ್ ಕವನ
ಚಂದದ, ವಾಸ್ತವದ ಕವನ
ಅನ್ನದಾತ ಹಾಗೂ ಭೂಮಿತಾಯಿಯನ್ನು ಅಕ್ಕರೆಯಿಂದ ಸ್ಮರಿಸಿರುವ ರೀತಿ ಸೊಗಸಾಗಿ ಮೂಡಿ ಬಂದಿದೆ ಕವನದಲ್ಲಿ.
ಜಗದ ಜೀವಿಗಳ ಜೀವದಾತರಾದ ಅನ್ನದಾತ ಮತ್ತು ಭೂಮಾತೆಯರನ್ನು ಸ್ಮರಿಸಿದ ಪರಿ ಬಹಳ ಸೊಗಸಾಗಿದೆ.