ಪಟವ ಹಾರಿಸಬೇಕೆ?
ಪಟವ ಹಾರಿಸಬೇಕೆ
ಜೀವನದ ಆಗಸದೆ
ಮೇಲೇರುವ ಯಶಸ್ಸಿನ
ಗಾಳಿ ಪಟವ
ಬನ್ನಿ ಎಲ್ಲರೂ ಕೇಳಿ ಮೊದಲು
ಗಟ್ಟಿ ಅನುಭವದ
ದಾರವ ಹೊಸೆವ
ಬಣ್ಣ ಬಣ್ಣದ ಕನಸುಗಳ ಕಾಗದದಿ ಆತ್ಮಸ್ಥೈರ್ಯದ ಕಡ್ಡಿಗಳ ಬೆಸೆವ
ಮೇಲೇರಿದರೂ ತಿರು ತಿರುಗಿ
ಕೆಳಗೆ ಬೀಳದಂತೆ ಹಾಕುವ
ತಗ್ಗಿ ಬಗ್ಗಿ ನಡೆವ ಗಟ್ಟಿಯಾದ
ಮನಸ್ಸಿನ ಸೂತ್ರವ
ಪೈಪೋಟಿಯ ಕವಣೆಗಳ
ಎದುರಿಸುವ ಸಲುವಾಗಿ
ಒತ್ತೊಟ್ಟಿಗೆ ಬೇಡ
ವಿಶಾಲ , ಎಚ್ಚರಿಕೆಯ ಬಯಲಲ್ಲಿ
ನಮ್ಮಳತೆಗೆ ತಕ್ಕ ಗಾತ್ರದ
ಬದುಕ ಕಟ್ಟಿ ಕೊಡುವ
ಪಟವ ಹಾರಿಸಬೇಕೆ
ಜೀವನದ ಆಗಸದೆ ಮೇಲೇರುವ ಯಶಸ್ಸಿನ
ಗಾಳಿ ಪಟವ
-ನಟೇಶ ( ಬಿ ಸಿ ನಾರಾಯಣ ಮೂರ್ತಿ), ಮೈಸೂರು
ವಾವ್ ಇಡೀ ಬದುಕಿನ ಹೊರಣವನ್ನು ಕವನದ ಮೂಲಕ ಪಡಿಮೂಡಿಸಿರುವ ರೀತಿ ಮನಮುಟ್ಟುವಂತೆ ನಿರೂಪಿಸಿ ದ್ದೀರಾ ಅಭಿನಂದನೆಗಳು ಸಾರ್.
ಚೆನ್ನಾಗಿದೆ
ಚೆನ್ನಾಗಿದೆ
ಜೀವನದ ಗಾಳಿಪಟವನ್ನು ಹೇಗೆ ಜೋಪಾನವಾಗಿ ಹಾರಿಸಿ ಆನಂದಿಸಬಹುದೆಂಬುದನ್ನು ಕವನದಲ್ಲಿ ಪಡಿಮೂಡಿಸಿದ ಬಗೆ ಸೊಗಸಾಗಿದೆ.