ಬೆಳಕು-ಬಳ್ಳಿ

ಸಮರ

Share Button

ಜೀವನವೊಂದು ಸಮರವೆಂದು ಬಲ್ಲವರು ಹೇಳಿದ್ದಾರೆ
ಹಾಗಲ್ಲವೆಂದು ಹೇಳಲು ನನಗೂ ಯಾವ ಕಾರಣಗಳೂ ಇಲ್ಲ
ಸಮರ ಒಳಗೂ ಹೊರಗೂ ಹಗಲೂ ಇರುಳೂ
ಏನನ್ನು ಪಡೆಯಲು ಏನನ್ನು ಕಳೆಯಲು
ನನಗೂ ಗೊತ್ತಿಲ್ಲ ಯಾರಿಗೂ ಗೊತ್ತಿಲ್ಲ

ಸಮರಾಂಗಣಕೆ ಹೊರಟರು ವೀರಯೋಧರು
ಕೋದಂಡವೇನು ಗದೆಯೇನು ತೋಮರಗಳೇನು
ಈಟಿ ಕಠಾರಿ ಮುಸಲ ಭರ್ಚಿ ಕೊಂತಗಳೇನು
ಇರಿಯಹೊರಟರೆ ಈಟಿ ಇರಿಯುವುದು ಎಂಥವರ!
ತಿವಿಯ ಹೊರಟರೆ ಗದೆಯು ತಿವಿಯುವುದು ಎಂಥವರ!
ಬೀಸಿ‌ಎಸೆದರೆ ಬಾಣ ಬಾಧಿಸುವುದು ಎಂತೆಂಥವರ!
ಹಾಗೆಂದು ಇರಿಯದಿದ್ದರೆ ತಿವಿಯದಿದ್ದರೆ ಎಸೆಯದಿದ್ದರೆ ……… ……..
ಅದು ರಣಾಂಗಣವೂ ಅಲ್ಲ.

ಒಳಗಣೊಳಗಣ ಸಮರಕ್ಕೆ ಸಿದ್ಧರು ಯಾರು
ಅವರೆ ಮತ್ತೆ ಸಿದ್ಧರು !

-ಡಾ.ಮಹೇಶ್ವರಿ. ಯು, ಕಾಸರಗೋಡು

9 Comments on “ಸಮರ

  1. ಕವನ ಬಹಳ ಚೆನ್ನಾಗಿದೆ.ಆಲೋಚನೆಗೆ ಪೆಟ್ಟಾಗಿದೆ ಅಭಿನಂದನೆಗಳು ಮೇಡಂ.

  2. ಕೊನೆ ಮೊದಲು ಇಲ್ಲದ ಬದುಕಿನ ಹೋರಾಟದ ಒಳಾರ್ಥ
    ತುಂಬಾ ನೈಜವಾಗಿ ಮೂಡಿದೆ.

  3. ಮನದೊಳಗಿನ, ಬಾಳಿನೊಳಗಿನ ಸಮರ…ಭಾವನಾತ್ಮಕ ಚಿಂತನೆ ಸೊಗಸಾಗಿದೆ.

Leave a Reply to B C Narayana Murthy Cancel reply

 Click this button or press Ctrl+G to toggle between Kannada and English

Your email address will not be published. Required fields are marked *