ಪರಾಗ

ನಿರ್ಧಾರ

Share Button


ಊರಾಚೆಗಿನ ಮನೆಯಲ್ಲಿ ಮೂರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಮುದ್ದಾದ ಮುಖವ ನೋಡುತ ತನ್ನ ಮನದ ನೋವುಗಳೆಲ್ಲವನ್ನು ಅರೆ ಕ್ಷಣ ಮರೆತರು ಕೂಡ ಮತ್ತೆ ಆ ನೋವುಗಳು ಬರಸಿಡಿಲಾಗಿ  ಚೇತನಾಳೆದೆಗೆ ಬಡಿಯುತ್ತಲಿದ್ದವು.ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಯು ಜೀವನದ ಸಂತೋಷವನ್ನೆಲ್ಲಾ ತೊಳೆದು, ಬರಿಯ ಬಿಂದುಗಳೊಳಗಿನ ಕೊನೆಯುಸಿರಿನ ಶಬ್ದವನ್ನಷ್ಟೇ ನನ್ನ ಬಾಳಿನಲ್ಲಿ ಬಿಟ್ಟು ಹೋಗಬಹುದೆಂದು ನಾನು ಅಂದುಕೊಂಡಿರಲಿಲ್ಲ. ನನ್ನದೆನ್ನುವುದೆಲ್ಲ ಗುಡುಗಿದ ಗುಡುಗಿನಲಿ ಮುದುಡಿಹೋಗಿದೆ. ಮಿಂಚಿದ ಮಿಂಚಿನಲಿ ಕರಗಿ ಹೋಗಿದೆ. ಈಗ ಅಕ್ಷರಶಃ ನಾನು ಬೀದಿಪಾಲು.

ಸಾಲದ್ದಕ್ಕೆ ನಾನು ನಂಬಿ ಬಂದವನಿಂದಲೇ ಹುಚ್ಚಿಯೆನ್ನುವ ಕಿರೀಟವಿರದ ಪಟ್ಟವು. ನನ್ನನ್ನು ಈ ಮನೆಯೊಳಗೆ ಬಂಧಿಸಿದೆಂದು ಕಣ್ಣೀರನೊರೆಸಿಕೊಂಡು ಮಗುವನ್ನು ತೊಟ್ಟಿಲಿಂದ ಎತ್ತಿಕೊಂಡು ಎದೆ ಹಾಲುಣಿಸಿ, ಮತ್ತೆ ತೊಟ್ಟಿಲಲ್ಲಿ ಮಲಗಿಸಿದಳು.ಅಷ್ಟರಲ್ಲೇ ಚೇತನಾಳಿಗೆ ಮನೆಯ ಹೊರಗೆ ತನ್ನ ಗಂಡನು ಕೆಲವರ ಜೊತೆ ನಿಂತು ಮಾತಾಡುವ ಸದ್ದು ಕೇಳಿಸಿತು. ತಕ್ಷಣವೇ ಬಾಗಿಲ ಬಳಿಯ ಕಿಟಕಿಯಿಂದಲೇ ಅವರಾಡುವ ಮಾತುಗಳನು ಕೇಳಿಸಿಕೊಂಡಾಗ ಈ ರಾತ್ರಿ ತನಗೂ ತನ್ನ ಮಗುವಿಗೂ ಮತ್ತೊಂದು ಕಂಟಕ ಎದುರಾಗುವುದೆಂದು ಆತಂಕ ಪಟ್ಟಳು.

ತಕ್ಷಣವೇ ಮಲಗಿರುವ ಮಗುವನ್ನು ಎತ್ತಿಕೊಂಡು, ಮನೆಯ ಹಿಂದಿನ ಬಾಗಿಲಿನಿಂದ ಸುರಿಯುವ ಮಳೆಯ ಲೆಕ್ಕಿಸದೆ, ತನ್ನೆಲ್ಲ ಕಷ್ಟಗಳನ್ನು ತಿಳಿದಿರುವ ಆತ್ಮೀಯ ಗೆಳತಿ ಮಮತಾಳ ಮನೆಗೆ ಹೊರಟುಬಿಟ್ಟಳು. ರಾತ್ರೋರಾತ್ರಿ ಸುರಿಯುವ ಮಳೆಯಲ್ಲಿ ಪುಟ್ಟ ಮಗುವಿನ ಜೊತೆ ಬಂದಂತಹ ಚೇತನಾಳಿಗೆ ಮಮತಾ ಆಶ್ರಯವನ್ನು ನೀಡಿ ರಕ್ಷಿಸಿದಳು.

ಮರುದಿನ ಚೇತನ ಮಮತಾಳಿಗೆ ತನ್ನ ಕಷ್ಟಗಳು, ತಾನು ಹುಚ್ಚಿ ಎಂಬುವ ಜನರ ಮನೋಧೋರಣೆಗೆ ಅಂತ್ಯಹಾಡಲು, ತನ್ನ ಗಂಡನಿಗೆ ಬುದ್ಧಿ ಕಲಿಸಲು ತನ್ನ ಬಳಿಯಿರುವ ಒಡೆವೆಗಳನ್ನೆಲ್ಲ ಮಾರಿ ಬರುವ ಹಣದಿಂದ ಚಿಕ್ಕದಾಗಿ ಗಾರ್ಮೆಂಟ್ಸ್ ಒಂದನ್ನು ಸ್ಥಾಪಿಸಿ, ತನ್ನಂತೆ ನೊಂದಿರುವ ಹೆಣ್ಣು ಮಕ್ಕಳಿಗೆ ಕೆಲಸ ಕೊಟ್ಟು, ಅವರ ಸಹಾಯದಿಂದ ಹಣ ಆಸ್ತಿ ಅಂತಸ್ತು ಕೀರ್ತಿ ಸಂಪಾದಿಸಿ, ತನ್ನಕನಸನ್ನು ನನಸು ಮಾಡುವುದನ್ನು ಹೇಳಿಕೊಂಡಳು.

ಚೇತನಾಳ ಕನಸು ನನಸಾಗಿಸಲು ಮಮತಾ ಬೆಂಗಾವಲಾಗಿ ನಿಂತಳು. ಚೇತನ ಅಂದುಕೊಂಡಂತೆ ಮೂರು ವರ್ಷಗಳಲ್ಲಿ  ತನ್ನ ಕನಸನ್ನು ನನಸಾಗಿಸಿಕೊಂಡಳು. ದೇಶ ವಿದೇಶಗಳಲ್ಲಿ ಚೇತನಾಳ ಗಾರ್ಮೆಂಟ್ಸ್ ಬಟ್ಟೆಗಳಿಗೆ ಬಹು ಬೇಡಿಕೆ ಹೆಚ್ಚಾಗಿ, ಕೆಲವೇ ವರ್ಷಗಳಲ್ಲಿ ಅಪಾರ ಆಸ್ತಿ ಅಂತಸ್ತು ಕೀರ್ತಿ ಗಳಿಸಿದಳು.

ತನಗೆ ಚಿತ್ರ ವಿಚಿತ್ರ ಹಿಂಸೆ ನೀಡಿ ವಿಕೃತ ಆನಂದ ಪಡೆಯುತ್ತಿದ್ದ ಗಂಡನೆದುರೇ ಎಂಎಲ್ಎ ಚುನಾವಣೆಗೆ ನಿಂತು ಅಭೂತಪೂರ್ವ ಗೆಲುವು ಪಡೆದು, ಸಚಿವೆಯೂ ಕೂಡ ಆದ್ಮೇಲೆ ಗಂಡನ ಅಕ್ರಮ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದು ಜೈಲು ಶಿಕ್ಷೆಗೆ ಗುರಿ ಪಡಿಸಿ, ತನ್ನ ಮಗುವಿನೊಡನೆ ತನ್ನಂತೆಯೇ ಸಮಾಜದಲ್ಲಿ ನೊಂದಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವ ಕಾರ್ಯಕ್ಕೆ ಮುಂದಾದಳು.

-ಶಿವಮೂರ್ತಿ.ಹೆಚ್.  ದಾವಣಗೆರೆ.

9 Comments on “ನಿರ್ಧಾರ

  1. ನಮ್ಮ ಕಥೆಯನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು

  2. ಬಹಳ ಚೆನ್ನಾಗಿದೆ ಕಥೆ. ಸೋತು ನಿಲ್ಲದೆ, ಬದುಕಲ್ಲಿ ಛಲವನ್ನು ಹೊಂದಿ ಏನನ್ನಾದರೂ ಸಾಧಿಸುವ ಪ್ರೇರಣೆಯನ್ನು ನೀಡುವ ಸಂದೇಶವನ್ನು ಹೊಂದಿದೆ.

    1. ಹೃತ್ಪೂರ್ವಕ ಕೃತಜ್ಞತೆಗಳು ಮೇಡಂ

  3. ಬಂದ ಕಷ್ಟಗಳಿಗೆ ಎದೆಯೊಡ್ಡಿ ಜೀವಿಸಿ ಸಾಧಿಸಿ ತೋರಿಸಿದ ಕಥಾನಾಯಕಿಯ ಬಾಳು ಉತ್ತಮ ಸಂದೇಶವನ್ನಿತ್ತಿದೆ. ಒಳ್ಳೆಯ ಕಥೆ..ಧನ್ಯವಾದಗಳು.

    1. ಹೃತ್ಪೂರ್ವಕ ಕೃತಜ್ಞತೆಗಳು ಹಿರಿಯರೇ

    1. ಹೃತ್ಪೂರ್ವಕ ಧನ್ಯವಾದಗಳು ಮೇಡಂ

  4. ಆಟ ಆಡುವವರೆಗೂ ಇರುತ್ತಾರೆ ಹೋರಾಟ ಮಾಡುವವರೂ ಇರುತ್ತಾರೆಚಿಕ್ಕದಾದ ಉತ್ತಮ ಸಂದೇಶ ಹೊಂದಿರುವ ಕಥೆ.ಅಭಿನಂದನೆಗಳು ಸಾರ್.

    1. ಹೃತ್ಪೂರ್ವಕ ಧನ್ಯವಾದಗಳು ಮೇಡಂ

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *