ಮಾತು – ಮೌನ

Share Button

“ಮಾತಾದಾಗ ಮೌನ,
ಗೀಚಿತು ಮನ ಕವನ,
ತೆರೆದ ಪುಸ್ತಕ ಈ ಜೀವನ,
ಮನದ ಎಲ್ಲಾ ಭಾವನೆ
ಹಾಳೆಯ ಮೇಲೆ
ಅನಾವರಣಗೊಂಡ ಕ್ಷಣ”.

“ಮಾತಿನಲ್ಲೇನಿಹುದು ಬರೀ ವಿರಸ,
ಸಿಹಿಮಾತು ತರಬಲ್ಲದು ಸಂತಸ,
ಕಟುಮಾತು ಹುಟ್ಟುಹಾಕಿ ದ್ವೇಷ,
ಕಾರ್ಮೋಡ ಕವಿದಂತೆ ಆಗುವುದು
ಮನದಾಗಸ”.

“ಇರಬೇಕು ನಾವಾಡುವ
ಪದಗಳ ಮೇಲೆ ಹಿಡಿತ,
ಆಗ ಹೊಮ್ಮುವುದು ಬಾಳಲ್ಲಿ
ಮಧುರ ಸಂಗೀತ,
ಯಾರು ಇರುವವರು ಇಲ್ಲಿ ಶಾಶ್ವತ?,
ಬದುಕು ಬರೀ ಎರಡು ದಿನದ ಆಟ”.

“ಈ ಸತ್ಯವನ್ನು ಅರಿತಲ್ಲಿ ನಿರಾಳ ಮನ,
ಮಾಡಬಯಸದು ಯಾರೊಡನೆಯೂ ಕದನ,
ಹೊಂದಿ ತುಸು ಸಮಾಧಾನ,
ಕಲಿಯುವುದು ಹಂತಹಂತವಾಗಿ
ಸಾಗುವುದನ್ನ”.

“ಆಡ ಬಯಸದೆ ಇದ್ದಾಗ
ಅರ್ಥವಿಲ್ಲದ ಮಾತು,
ಹೋಗುವುದು ಮನಸ್ಸು
ಮೌನದೊಳಗೆ ಬೆರೆತು,
ಈ ಮೌನವೂ ಒಂದು ಸುಂದರ ಜಗತ್ತು,
ಅರ್ಥವಾಗುವುದು ಹೋದಾಗಲಷ್ಟೇ
ಈ ಲೋಕದೊಳಗೊಮ್ಮೆ ಕಲೆತು”.

“ಇಳಿಸಂಜೆ ಸರಿದು ಆವರಿಸೊ
ಕತ್ತಲೊಳಗು ಇಹುದೊಂದು ದೀರ್ಘ ಮೌನ,
ಅಲ್ಲಿ ಹುಡುಕುವುದು ಕಣ್ಣು
ಆಗಸದಲ್ಲಿ ಚಂದಿರನ,
ಕತ್ತಲು – ಬೆಳಕಿನ ಆಟದಂತೆಯೇ
ಈ ಜೀವನ,
ಆಗದೆ ಇರುವುದೆ ಪ್ರಕೃತಿಯಲ್ಲೂ
ವಸಂತನ ಆಗಮನ ?”.

ನಿಜಕ್ಕೂ ಮೌನದಲ್ಲಿ ಒಂದುಅದ್ಭುತ ಶಕ್ತಿ ಇದೆ. ಅನಗತ್ಯ ಮಾತು ವಿರಸವನ್ನು ತಂದರೆ ಮೌನ ಅಂತಹ ವಿರಸವನ್ನು ಹೋಗಲಾಡಿಸುವ ಔಷಧ. ಪ್ರೀತಿ ತುಂಬಿದ ಹೃದಯಗಳ ನಡುವೆಯೂ ಮೌನವೇ ರೂವಾರಿ. ಮಾತು ಆಡಲಾಗದ್ದನ್ನು  ಕಣ್ಣುಗಳು ಇಲ್ಲಿ ಮೌನದ ರೂಪದಲ್ಲಿ ಮನಸ್ಸಿನ ಭಾವನೆಗಳನ್ನು ಅರುಹುತ್ತವೆ. ಕೆಲವೊಂದು ಬಾರಿ ಮಾತುಗಳನ್ನು ಆಡಬೇಕಾದಲ್ಲಿ ಆಡದೆ ಮಾನವಾಗಿ ಇದ್ದರೆ ಅದು ಕೂಡ  ಸರಿಯಾದ ರೀತಿ ಅಲ್ಲ. ಮಾತು – ಮೌನಗಳೆರಡೂ ಹಿತಮಿತವಾಗಿದ್ದಾಗ ಬದುಕು ಸುಂದರ .
.
– ನಯನ ಬಜಕೂಡ್ಲು

17 Responses

  1. Vasundhara says:

    ಮಾತು-ಮೌನ ಕವಿತೆ ಚೆನ್ನ..!

  2. ಶಿವಮೂರ್ತಿ.ಹೆಚ್. says:

    ಬಹಳ ಅರ್ಥಪೂರ್ಣ ಕವಿತೆ ಮೇಡಂ

  3. ವಿದ್ಯಾ says:

    ಮಾತು ಮೌನದ ಅನಾವರಣ ತುಂಬಾ ಸೊಗಸಾಗಿ ಮೂಡಿ ಬಂದಿದೆ,,ಹೀಗೆ ಕವನಗಳು ಹೆಚ್ಚಾಗಿ ಮೂಡಿ ಬರಲಿ

  4. Hema says:

    ಚೆಂದದ ಅರ್ಥಪೂರ್ಣ ಕವನ..

  5. ಶಂಕರಿ ಶರ್ಮ says:

    ಹೌದು.. ಅದಕ್ಕೇ, ಮಾತು ಬೆಳ್ಳಿ, ಮೌನ ಬಂಗಾರ ಎನ್ನುವ ಗಾದೆ ಮಾತು ಹಿರಿಯರಿಂದ ಮೂಡಿಬಂದಿದೆ. ಬಹಳ ಒಳ್ಳೆಯ ಸಂದೇಶ ಹೊತ್ತ ಕವನ. ಧನ್ಯವಾದಗಳು ನಯನಾ ಮೇಡಂ.

  6. ಉತ್ತಮ ಮೌಲ್ಯದ ಕವಿತೆ
    ವಂದನೆಗಳು

  7. ನಾಗರತ್ನ ಬಿ. ಅರ್. says:

    ಅರ್ಥ ಪೂರ್ಣ ವಾ ದ ಕವನ. ಅಭಿನಂದನೆಗಳು ಮೇಡಮ್.

  8. Padma Anand says:

    ಮಾತು, ಮೌನಗಳೆರಡರ ಮಹತ್ವವನ್ನು ಕಾವ್ಯಮಯವಾಗಿ ಕಟ್ಟಿ ಕೊಟ್ಟಿರುವ ನಿಮಗೆ ಅಭಿನಂದನೆಗಳು

  9. Vathsala says:

    ಕವನದ ಜೊತೆಗೆ ಸಾರಾಂಶವನ್ನು ಹೇಳಿರುವುದು
    ವಿಶೇಷವಾಗಿದೆ, ನಯನರವರೆ.

  10. ಮಹೇಶ್ವರಿ ಯು says:

    ಕತ್ತಲೊಳಗೊಂದು ದೀಪ ಮೌನ ಅಥ೯ವತ್ತಾದ ಸಾಲುಗಳು

  11. Dr. Krishnaprabha M says:

    ಚಂದದ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: