ಬೇಲಿ
ಮಾನವ ಬೇಲಿಯ
ಹಾರಲಾರದ ಮಾನಿನಿ
ಇವಳು,
ಹರಿದ ತೇಪೆ ಹಾಕಿದ
ಲಂಗ ಕಾಣದಂತೆ
ಜರತಾರಿ ಸೀರೆ ಉಟ್ಟು
ನಲಿವಳು ನೋವ ನುಂಗಿ,,,!
ಬಿರು ನುಡಿಗೆ ಗೀರಿದ
ಗಾಯಕ್ಕೆ ಚಿಮ್ಮಿದ ರಕುತವ
ಮದರಂಗಿಯ ಬಣ್ಣವೆನ್ನುತಾ
ಬೀಗುವಳು ಸುಮ್ಮಾನದಿ
ನೋವ ನುಂಗಿ,,,,!
ಎದೆಗೂಡಲಿನ ಬೆಂಕಿ
ಧಗಧಗವೆಂದರು
ತುಟಿ ಕಚ್ಚಿ ಹಿಡಿವಳು
ಬಿಕ್ಕುಗಳು ಹೊರಬರದಂತೆ
ನಗೆಯ ಅಲೆಯಲಿ ತೇಲಿಸುತಾ
ನೋವ ನುಂಗಿ,,,!
-ವಿದ್ಯಾ ವೆಂಕಟೇಶ್. ಮೈಸೂರು.
ನೋವ ನುಂಗಿ ನಗೆಯ ಸೂಸುವ ಇವಳು
ಇಳೆಯ ಹೆಮ್ಮೆಯಲ್ಲದೆ ಇನ್ನೇನು…
ಚೆನ್ನಾಗಿದೆ ಪದ್ಯ.
ಮಾನಿನಿಯ ಮನದಾಳ ದರಿಸುವ ಮುಖವಾಡದ ಕಲ್ಪನೆ ಸೊಗಸಾಗಿ ಮೂಡಿ ಬಂದಿದೆ.
ಮಾನಿನಿಯು, ಎಲ್ಲಾ ಕಷ್ಟಗಳನ್ನು ನುಂಗಿ, ನಗುವ ಮುಖವಾಡ ಧರಿಸುವ ಪರಿ ನಿಜಕ್ಕೂ ದು:ಖದಾಯಕ…
ಗೆಳತಿ… ಯಾವುದು ನೋವು-ನಲಿವು…. ಯಾವುದು ದುಖಃ-ಸಂತೋಷ…. ಎಲ್ಲಾ ನಮ್ಮ ಮನಸ್ಸಿನ ಆಯಾಮಗಳು..
ಒಳ್ಳೆಯ ಮನಸ್ಸಿಗೆ ಸಹಿಷ್ಣುತೆ ನೋವಾದರೆ,ಜೋರಾಗಿ ಪ್ರತಿಭಟಿಸುವ ಮನಸ್ಸು ಸಂತೋಷ ವನ್ನಾಚರಿಸುವುದು
ಧನ್ಯವಾದಗಳು
ಏಕೆ ಸೋದರಿ ಯಾವಾಗಲೂ ವಿಷಾದ ವ್ಯಕ್ತಪಡಿಸುವ ವಿಷಯ ಆರಿಸಿಕೊಳ್ಳುತ್ತೀ ಅದು ಮಹಿಳಾ ಮಣಿಗಳಿಗೆ ಜನ್ಮಸಿದ್ಧ ಹಕ್ಕು ಅದರಿಂದ ಹೊರಗೆ ಬಾ..
Very nice
Thumba chennagide.. Bahushaha eehina generation ashtu sahisikollalararu annisuthe still good one keep writing..