ಎಚ್ಚರ..
ಉಲ್ಲಸಿತ ಮನಸ್ಸಿನ ಸೊಲ್ಲಡಗಿಹೋಗಿ
ಎಲ್ಲಾ ಅಯೋಮಯ ಏನೋ ಭಯ
ಸುಮ್ಮನೆ ಸುತ್ತುತ್ತಿದ್ದ ಭೂಮಿಯಲ್ಲಿ ಎನೋ ವ್ಯತ್ಯಾಸ
ಯಾರೋ ತಡೆದು ನಿಲ್ಲಿಸಲು ಹೊರಟಿರುವಂತೆ ಭಾಸ
ಯಾರೋ ಅಟ್ಟಿಸಿಕೊಂಡು ಬರುವಂತೆ ಖುರಪುಟಗಳ ಸದ್ದು
ಎಲ್ಲರೂ ಓಡುತ್ತಿರುವಂತೆ ಎದ್ದು ಬಿದ್ದು
ಹೋರಾಟ ಕಷ್ಟ ,ದಾರಿಯೂ ಅಸ್ಪಷ್ಟ
ತಪ್ಪಿಸಿಕೊಳ್ಳುವುದೇ ಈಗ ಸರಿಯಾದ ಆಟ
ಕರುಣೆಗಳ ಮರೆತ ಕ್ರೂರ ಜಗತ್ತು
ಇಲ್ಲಿಯ ನಾಳೆಗಳು ಹೇಗೋ ಯಾರಿಗೆ ಗೊತ್ತು
ಹುಟ್ಟಿದ ಮೇಲೆ ಇಡುವ ಹೆಜ್ಜೆಯೇ ಮರಣದೆಡೆಗಲ್ಲವೇ
ಧೃತಿಗೆಡದೆ ಮತಿಗೆಡದೆ ಎಚ್ಚರವಿರಲಿ ಮನದೆ
ಕಳೆದುಹೋಗಲಿದೆ ಕೆಟ್ಟದಿನಗಳಿವು
ಮತ್ತೆ ಮರಳಿ ಬರಲಿದೆ ಸ್ವಸ್ಥ ಹೊಸತನವು
-ನಟೇಶ ( ಬಿ ಸಿ ನಾರಾಯಣ ಮೂರ್ತಿ) ,ಮೈಸೂರು
ವಾಸ್ತವ ಸಂಗತಿಯ ಅನಾವರಣವನ್ನು ಮಾಡಿ ಸಕಾರಾತ್ಮಕ ಚಿಂತನೆಯೊಂದಿಗೆ ಮುಕ್ತಾಯಮಾಡಿರವ ಕವನ ಸರಳ ಸುಂದರವಾಗಿ ಮೂಡಿ ಬಂದಿದೆ ಸಾರ್
ಬ್ಯೂಟಿಫುಲ್
ವಂದನೆಗಳು ಮೇಡಮ್
ಹೌದು.. ಸದಾ ಆಶಾಭಾವ ಹೊತ್ತ ಜೀವನವು ನಮ್ಮದಾಗಬೇಕು.. ಚಂದದ ಕವನ.