ಬೆಳಕು-ಬಳ್ಳಿ

ದೂರ- ತೀರ- ಅಂತರ

Share Button

ಪ್ರವಾಹದಲ್ಲಿ ಕೊಚ್ಚಿ ಹೋದವರಿಗಾಗಿ
ಹುಚ್ಚೆದ್ದು ಪ್ರಲಾಪಿಸಿದ್ದರು
ಕ್ಷಾಮದಲ್ಲಿ ಬಸವಳಿದವರಿಗೂ
ಕ್ಷೇಮ ವಿಚಾರಿಸಿದ್ದರು
ಮಾರಣಾಂತಿಕ ರೋಗಗಳ ಸಾವಿಗೆ
ಮಮ್ಮಲ ಮರುಗಿದ್ದರು
ಭುವಿ ಕಂಪಿಸಿ, ಬದುಕೇ ಕುಸಿದವರ
ನೋವಿಗೆ ಸ್ಪಂದಿಸಿದ್ದರು
ಅಪಘಾತಗಳಲ್ಲಿ ಅಸುನೀಗಿದವರ
ಅಪ್ಪಿ ಆಕ್ರಂದಿಸಿದ್ದರು
ಆದರೆ ಕೊರೋನಾ ಕರಾಮತಿಗೆ
ಭಾವಬಂಧಗಳೇ ಬಂಧನ!

ಜಗದ್ವ್ಯಾಪಿಸಿ ತಲ್ಲಣಿಸಿರುವ
‘ಕೊರೋನಾ’ ಹೆಸರಷ್ಟೇ ಸಾಕು
ಮೈಲು ದೂರ ಓಡಲು
ಭಯದಿ ಚದುರಿ ಅದುರಿ
ಪ್ರಾಣವೇ ಪರಿತ್ಯಜಿಸಿ
ಮನುಷ್ಯ ತರಗೆಲೆ ಉದುರಿದಂತೆ ಉದುರಿ
ಮರಣದಲ್ಲೂ ಯಾರಿಲ್ಲ ಬೀಳ್ಕೊಡಲು
ಅಂತಿಮ ದಶನವಿಲ್ಲ, ಸ್ವಶವಿಲ್ಲ
ಆಪ್ತರಿಗೆ ಅರುಹುವಂತಿಲ್ಲ
ಹೀಗೂ ಬಂತಲ್ಲ ಸಾವು!
ಮರೆಯಲಾದೀತೇ ಇದರ ನೋವು?

ವರುಷಗಳ ಒಡನಾಟ, ಸಹಬಾಳ್ವೆಯ ಬೆಸುಗೆ,
ಸಿರಿ ಅಂತಸ್ತುಗಳ ತೊಡುಗೆ
ಕ್ಷಣಮಾತ್ರದಲ್ಲಿ ಕಳಚಿ
ಮನಸುಗಳು ಮುದುಡಿ, ಬಾಡಿ
ನಮ್ಮನಮ್ಮ ನಡುವೆಯೇ
ದೂರ- ತೀರ- ಅಂತರ
ಕೊರೋನಾ ಇದು ಸರಿನಾ?
ಕುರುಹು ಇಲ್ಲದಂತೆ ಕಮರಿಹೋಗು
ಭೂಮಂಡಲವನ್ನೇ ತೊರೆದು
ಮಾನವರ ಈ ಅಂಗಳಕ್ಕೆ
ಮಂಗಳಕರವಾಗು

-ಡಿ. ಯಶೋದಾ

11 Comments on “ದೂರ- ತೀರ- ಅಂತರ

  1. ಪ್ರಸ್ಥುತ ವಾಸ್ತವಿಕ ಕವನ ..ಹೌದು ಸತ್ಯ ಮಾನವರ ಬದುಕಿಗೆ ಕಂಟಕವಾಗಿದೆ ..ನಿಮ್ಮ ಭಾವಲಹರಿಯಲ್ಲಿ ಹರಿದು ಬಂದ ಪದಗುಚ್ಚ ಅರ್ಥಗರ್ಭಿತ ಸಾಲುಗಳು
    ಚೆಂದವಿದೆ ನಿಮ್ಮ‌ ಬರಹ ಮೇಡಂ ..
    ಶುಭವಾಗಲಿ ..

    ಮಾನಸ ಕೆ ಕೆ
    ಬೆಂಗಳೂರು..

  2. ಎಷ್ಟು ಮಮ್ಮಲ ಮರುಗಿದರೂ ಸಾಲದು ಈ ಮಹಾಮಾರಿ ಕರೋನಾ ಹಾವಳಿಗೆ. ಸಮಕಾಲೀನ ಸತ್ಯದ ಸೊಗಸಾದ ಅನಾವರಣ

  3. ಕರಾಳ ಸತ್ಯವೊಂದರ ಅನಾವರಣದ ಪರಿ ಮನಮುಟ್ಟಿತು.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *