ದೂರ- ತೀರ- ಅಂತರ
ಪ್ರವಾಹದಲ್ಲಿ ಕೊಚ್ಚಿ ಹೋದವರಿಗಾಗಿ
ಹುಚ್ಚೆದ್ದು ಪ್ರಲಾಪಿಸಿದ್ದರು
ಕ್ಷಾಮದಲ್ಲಿ ಬಸವಳಿದವರಿಗೂ
ಕ್ಷೇಮ ವಿಚಾರಿಸಿದ್ದರು
ಮಾರಣಾಂತಿಕ ರೋಗಗಳ ಸಾವಿಗೆ
ಮಮ್ಮಲ ಮರುಗಿದ್ದರು
ಭುವಿ ಕಂಪಿಸಿ, ಬದುಕೇ ಕುಸಿದವರ
ನೋವಿಗೆ ಸ್ಪಂದಿಸಿದ್ದರು
ಅಪಘಾತಗಳಲ್ಲಿ ಅಸುನೀಗಿದವರ
ಅಪ್ಪಿ ಆಕ್ರಂದಿಸಿದ್ದರು
ಆದರೆ ಕೊರೋನಾ ಕರಾಮತಿಗೆ
ಭಾವಬಂಧಗಳೇ ಬಂಧನ!
ಜಗದ್ವ್ಯಾಪಿಸಿ ತಲ್ಲಣಿಸಿರುವ
‘ಕೊರೋನಾ’ ಹೆಸರಷ್ಟೇ ಸಾಕು
ಮೈಲು ದೂರ ಓಡಲು
ಭಯದಿ ಚದುರಿ ಅದುರಿ
ಪ್ರಾಣವೇ ಪರಿತ್ಯಜಿಸಿ
ಮನುಷ್ಯ ತರಗೆಲೆ ಉದುರಿದಂತೆ ಉದುರಿ
ಮರಣದಲ್ಲೂ ಯಾರಿಲ್ಲ ಬೀಳ್ಕೊಡಲು
ಅಂತಿಮ ದಶನವಿಲ್ಲ, ಸ್ವಶವಿಲ್ಲ
ಆಪ್ತರಿಗೆ ಅರುಹುವಂತಿಲ್ಲ
ಹೀಗೂ ಬಂತಲ್ಲ ಸಾವು!
ಮರೆಯಲಾದೀತೇ ಇದರ ನೋವು?
ವರುಷಗಳ ಒಡನಾಟ, ಸಹಬಾಳ್ವೆಯ ಬೆಸುಗೆ,
ಸಿರಿ ಅಂತಸ್ತುಗಳ ತೊಡುಗೆ
ಕ್ಷಣಮಾತ್ರದಲ್ಲಿ ಕಳಚಿ
ಮನಸುಗಳು ಮುದುಡಿ, ಬಾಡಿ
ನಮ್ಮನಮ್ಮ ನಡುವೆಯೇ
ದೂರ- ತೀರ- ಅಂತರ
ಕೊರೋನಾ ಇದು ಸರಿನಾ?
ಕುರುಹು ಇಲ್ಲದಂತೆ ಕಮರಿಹೋಗು
ಭೂಮಂಡಲವನ್ನೇ ತೊರೆದು
ಮಾನವರ ಈ ಅಂಗಳಕ್ಕೆ
ಮಂಗಳಕರವಾಗು
-ಡಿ. ಯಶೋದಾ
Eegina manava maranakke yavude rogaddallu saththaru nee barada kavana spandisuthade
ವಾಸ್ತವಿಕತೆಯ ಕಟು ಸತ್ಯವನ್ನು ಅನಾವರಣಗೊಳಿಸಿರುವ ಈ ಕವನ ಅರ್ಥಪೂರ್ಣ ವಾಗಿದೆ.ಅಭಿನಂದನೆಗಳು ಮೇಡಂ.
Yeah, so true!!
ವಾಸ್ತವ
ಅರ್ಥಪೂರ್ಣವಾದ ಕವನ. ಧನ್ಯವಾದಗಳು
ತುಂಬ ಚೆಂದ
ಪ್ರಸ್ತುತ ಚಿತ್ರಣ. ಅಭಿನಂದನೆಗಳು
ಪ್ರಸ್ಥುತ ವಾಸ್ತವಿಕ ಕವನ ..ಹೌದು ಸತ್ಯ ಮಾನವರ ಬದುಕಿಗೆ ಕಂಟಕವಾಗಿದೆ ..ನಿಮ್ಮ ಭಾವಲಹರಿಯಲ್ಲಿ ಹರಿದು ಬಂದ ಪದಗುಚ್ಚ ಅರ್ಥಗರ್ಭಿತ ಸಾಲುಗಳು
ಚೆಂದವಿದೆ ನಿಮ್ಮ ಬರಹ ಮೇಡಂ ..
ಶುಭವಾಗಲಿ ..
ಮಾನಸ ಕೆ ಕೆ
ಬೆಂಗಳೂರು..
ಎಷ್ಟು ಮಮ್ಮಲ ಮರುಗಿದರೂ ಸಾಲದು ಈ ಮಹಾಮಾರಿ ಕರೋನಾ ಹಾವಳಿಗೆ. ಸಮಕಾಲೀನ ಸತ್ಯದ ಸೊಗಸಾದ ಅನಾವರಣ
ಕರಾಳ ಸತ್ಯವೊಂದರ ಅನಾವರಣದ ಪರಿ ಮನಮುಟ್ಟಿತು.
ಸೂಪರ್ ಕವನಯಶೋದ ಮೇಡಂ