‘ಸುರಹೊನ್ನೆ’ಗೊಂದು ನವಿಲು ಗರಿ!
ಸುಮಾರು ಆರು ತಿಂಗಳ ಮಗು ಅಂಬೆಗಾಲಿಕ್ಕಲು ಹವಣಿಸುತ್ತದೆ. ಕೈಗೆ ಸಿಕ್ಕಿದುದನ್ನು ಪರಿಶೀಲಿಸುವ ಕುತೂಹಲ ಪ್ರದರ್ಶಿಸುತ್ತದೆ. ನಮ್ಮ ಅಂತರ್ಜಾಲ ‘ಸುರಹೊನ್ನೆ’ ಗೆ ಈಗ ಆರು ತಿಂಗಳಿನ ಮಗುವಿನ ಪ್ರಯೋಗಶೀಲತೆ!
‘ಸುರಹೊನ್ನೆ’ ಆರಂಭವಾದಲ್ಲಿಂದ ಇಂದಿನ ವರೆಗೂ ಏನಾದರೊಂದು ವಿಭಿನ್ನವಾಗಿ ಮಾಡುವ ಹುಮ್ಮಸ್ಸಿದೆ. ವಿನ್ಯಾಸ ಬದಲಿಸುತ್ತಿರುತ್ತೇವೆ, ಹೊಸ ಅಂಕಣಗಳನ್ನು ಶುರು ಮಾಡಿದ್ದೇವೆ. ಇದುವರೆಗೆ ಯಾವುದೇ ಲೇಖನ ಬರೆಯದಿದ್ದವರೂ ಕೂಡಾ ಲೇಖನ ಅಥವಾ ಕವನ ಬರೆಯುವಂತೆ ‘ಸುರಹೊನ್ನೆ’ ಪ್ರೇರೇಪಿಸಿದೆಯೆಂದು ಬರೆದವರು ಹೇಳುವಾಗ ನಮಗೆ ಸಡಗರವಾಗುತ್ತದೆ.
ಬರಹಗಾರರ ಬಳಗಕ್ಕೆ ಹೊಸ ಸದಸ್ಯರು ಸೇರುತ್ತಿದ್ದಾರೆ. ಈ 6 ತಿಂಗಳ ಅವಧಿಯಲ್ಲಿ 200 ನೆಯ ಲೇಖನ ಅಪ್ ಲೋಡ್ ಆಗಿದೆ. Slow and Steady Wins the Race ಎಂಬ ನಂಬಿಕೆ ನಮ್ಮದು. ಈ ನಡುವೆ, ಮೊಬೈಲ್ ಪೋನ್ ನಲ್ಲಿ ಓದುವವವರ ಅನುಕೂಲತೆಗಾಗಿ ‘ಸುರಗಿ’ ಎಂಬ ಹೆಸರಿನ Andriod App ಸಿದ್ಧವಾಗಿದೆ. ಸ್ಮಾರ್ಟ್ ಫೋನ್ ನ Playstore ನಿಂದ download ಮಾಡಬಹುದು. ಫೇಸ್ ಬುಕ್ ನಲ್ಲಿ ಕೂಡಾ ‘ಸುರಹೊನ್ನೆ’ ಎಂಬ ಪುಟವನ್ನು ತೆರೆದಿದ್ದೇವೆ. ಇವುಗಳ ಮೂಲಕ ಹೆಚ್ಚು ಜನರನ್ನು ತಲಪಲು ಸಾಧ್ಯವಾಗುವ ಭರವಸೆ ನಮ್ಮದು.
ತಾವೆಲ್ಲಾ ಸಹೃದಯ ಓದುಗರಾಗಿ ಹಾಗೂ ಬರಹಗಾರರಾಗಿ ‘ಸುರಹೊನ್ನೆ’ಯನ್ನು ಬೆಳೆಸುವಿರೆಂಬ ನಿರೀಕ್ಷೆಯೊಂದಿಗೆ, ವಂದನೆಗಳು.
-ಸಂಪಾದಕಿ.
Very nice…all the best ..
ಸುರಹೊನ್ನೆ ಚೆನ್ನಾಗಿ ಮೂಡಿಬರುತ್ತಿದೆ. ಉತ್ತಮ, ಸರಳ ಲೇಖನಗಳನ್ನು ಕೂಡಾ ಪ್ರಕಟಿಸುವುದರಿಂದ ನಮ್ಮಂಥಹ ಸಾಮಾನ್ಯ ಓದುಗರಿಗೂ ಖುಷಿಯಾಗುತ್ತದೆ. ಸುರಗಿ ಆಪ್ ನ್ನು ಕೂಡಾ ಡೌನ್ ಲೋಡ್ ಮಾಡಿದ್ದೇನೆ.