ಕಸದಿಂದ ಅದ್ಭುತ ಸೃಷ್ಟಿ.. ರಾಕ್ ಗಾರ್ಡನ್
‘ಕಸದಿಂದ ರಸ’ ಎಂಬ ಮಾತನ್ನು ರುಜುವಾತುಗೊಳಿಸುವ ಹಲವರು ಪ್ರಯತ್ನಗಳನ್ನು ನಮ್ಮ ಸುತ್ತುಮುತ್ತಲು ಗಮನಿಸಿರುತ್ತೇವೆ.
ಕಸದಿಂದಲೇ ಸೃಷ್ಟಿಸಿರುವ ಅದ್ಭುತ ಚಂಡಿಘಢದ ‘ರಾಕ್ ಗಾರ್ಡನ್’. ಅದೂ ಅಂತಿಂಥ ಕಸವಲ್ಲ, ಕೈಗಾರಿಕೆಗಳಲ್ಲಿ ನಿರುಪಯುಕ್ತವಾದ ಪದಾರ್ಥಗಳು, ಒಡೆದ ಗಾಜಿನ ಚೂರುಗಳು, ಮಡಿಕೆ ಕುಡಿಕೆಗಳು, ಪೈಪುಗಳು, ಬೆಣಚು ಕಲ್ಲುಗಳು ಇತ್ಯಾದಿ ‘ಕಸಗಳು’ ಇಲ್ಲಿ ಗಾರೆಯೊಂದಿಗೆ ಸೇರಿ ಸುಂದರವಾದ ವಿವಿಧ ಪ್ರಾಣಿ-ಪಕ್ಷಿ, ಬೊಂಬೆ, ಗೋಪುರಗಳಾಗಿ ಕಂಗೊಳಿಸಿವೆ.
ಗಾರ್ಡನ್ ಎಂದಾಕ್ಷಣ ಬಣ್ಣ-ಬಣ್ಣದ ಹೂವುಗಳು, ಹಸಿರು ಹುಲ್ಲು ಹಾಸುಗಳು ನೆನಪಿಗೆ ಬರುತ್ತವೆ. ಆದರೆ ‘ರಾಕ್ ಗಾರ್ಡನ್’ ಭಿನ್ನವಾದುದು. ಇಲ್ಲಿ ತಾಂತ್ರಿಕತೆಯೊಂದಿಗೆ ಕ್ರಿಯಾಶೀಲತೆಯು ಮೇಳೈಸಿದೆ. ಈ ‘ಗಾರ್ಡನ್ ‘ ನ ಕಣಿವೆಗಳಲ್ಲಿ ನಡೆದಾಡುವುದು ಒಂದು ಅವಿಸ್ಮರಣೀಯ ಅನುಭವ.
ಇದರ ರೂವಾರಿ ‘ನೇಕ್ ಚಂದ್’ ಎಂಬವರು.
– ಹೇಮಮಾಲಾ.ಬಿ
ವಾವ್ ..ನಿಜವಾಗಿಯೂ ಅತ್ಯ೦ತ ಸು೦ದರವಾದ ಗಾರ್ಡನ್ ಆಗಿದೆ
ರಾಕ್ ಗಾರ್ಡನ್ ಫೋಟೋಸ್ ಚಂದ ಇವೆ. ಆದರೆ ಅದು ಎಲ್ಲಿದೆ ಎನ್ನುವುದನ್ನು ಹೇಳಲು ಮರೆತಿರಿ. ನೀವು ಹೇಳಿದ್ದಲ್ಲಿ ಒಮ್ಮೆ ಆಕಡೆ ಬಂದಾಗ ಭೇಟಿ ಕೊಡಬಹುದಿತು.
ಥ್ಯಾಂಕ್ಸ್ . ಈ ರಾಕ್ ಗಾರ್ಡೆನ್ ಇರುವುದು ಚಂಡಿಗರ್ ನಲ್ಲಿ. ದೆಹಲಿಯಿಂದ ಸುಮಾರು 270 ಕಿ. ಮಿ. ದೂರದಲ್ಲಿದೆ. ಇದು ಬಹಳ ಅಪರೂಪವಾದ ಗಾರ್ಡನ್. ನನಗೆ ತಿಳಿದಿರುವಂತೆ, ದಕ್ಷಿಣ ಭಾರತದಲ್ಲಿ, ಕೇರಳದ ಪಾಲಕ್ಕಾಡ್ ನ ‘ಮಲಪುಝ’ ದಲ್ಲಿ ಮಾತ್ರ , ಇದೇ ಮಾದರಿಯ ಕಸಗಳಿಂದ ಸೃಷ್ಟಿಸಿದ ರಾಕ್ ಗಾರ್ಡನ್ ಇದೆ.