ಅನಾಮಿಕ
ಸ್ಫಟಿಕದಂತಹ ನೀರುಧುಮ್ಮಿಕ್ಕಿ ಹರಿವಾಗ,
ನೊರೆ ಹಾಲ ಬಣ್ಣ ಬಳಿದವರು ಯಾರು?
ಬೆಳಗಿನ ಜಾವದಿ, ಭೂಮಿಯನುತಬ್ಬಿದ,
ಮಂಜಿನದುಪ್ಪಟಿಯ ಹಾಸಿದವರಾರು?
ಹತ್ತಿಯಂದದೆಇರುವ, ಮೋಡದೊಳು
ಮಳೆಹನಿಯ ಮೂಟೆಗಳ ತುಂಬಿದವರಾರು?
ಮಳೆ ಬಿಸಿಲು ಬಂದಾಗ, ಕಾಮನಬಿಲ್ಲನ್ನು ಮೂಡಿಸಿ
ಹಿಡಿದು ಹಾಗೇ ನಿಂತುಕೊಂಡವರಾರು?
ಅದಕೆ ಕುಂಚದಿ, ವಿವಿಧ ಬಣ್ಣಗಳ
ಬಳಿದಂತ ಕಲಾವಿದನಾರು?
ಅದೃಶ್ಯವಾಗಿರುವ ಗಾಳಿಯೊಳು ಜೀವಾನಿಲವ ತುಂಬಿ,
ಎಲ್ಲೆಲ್ಲೂ ಪಸರಿಸಿದವರಾರು?
ಹಸಿರು ಬಣ್ಣದ ಬಳ್ಳಿ ಗಿಡಮರಗಳ ಒಳಗೆ,
ಹೂಹಣ್ಣ ಸಿಹಿಯಾಗಿ ನೆಟ್ಟುಇಟ್ಟವರಾರು?
ಈ ಸೌಂದರ್ಯ ನೋಡಿ, ಅನುಭವಿಸದಿರೆ ಮನುಜ
ಮೋಸ ಹೋಗುವೆ ಖಂಡಿತಎನ್ನುವೆನು ನಾನು.
– ಸೌಮ್ಯ
ಸೃಷ್ಟಿಕರ್ತನ ನೋಡುವ ನೆನೆಯುವ ನಿಸರ್ಗ ಹಾದಿಯ ಚಿತ್ರಣ ನಾ ಮಗುವೆಂಬಂತೆ ಕೈಮುಗಿವಂತೆ ಮಾಡಿದ ಧನ್ಯ ಕ್ಷಣದ ಅನುಭನ.ನೀಡಿದ ಕವನ. ಅಭಿನಂದನೆ
Superb akka
ಸುಂದರವಾದ ಕವನ
ಪ್ರಕೃತಿ ಸೌಂದರ್ಯದಲ್ಲಿ ದೈವದ ದರ್ಶನ ಮಾಡಿಸುವ ಕವಿತೆಗೆ ನಮೋ ನಮೋ
ಅರ್ಥಪೂರ್ಣವಾದ ಕವನ. ಧನ್ಯವಾದಗಳು
Beautifully composed
ಈ ಪ್ರಕೃತಿಯ ರಹಸ್ಯವನ್ನು ಬಲ್ಲವರು ಯಾರು? ವಿಜ್ಞಾನ ಎಷ್ಟು ಮುಂದುವರಿದರೂ ಈ ರಹಸ್ಯವನ್ನು ಮಾತ್ರ ಅರಿಯಲು ಯಾರಿಂದಲೂ ಇನ್ನೂ ಸಾಧ್ಯವಾಗಿಲ್ಲ! ಇದನ್ನು ನೋಡಿ ಆನಂದಿಸುವ ಭಾಗ್ಯ ನಮಗಿದೆಯಲ್ಲ.. ನಾವೇ ಪುಣ್ಯವಂತರು! ಸೊಗಸಾದ ಕವನ..ಧನ್ಯವಾದಗಳು ಮೇಡಂ.
ಪ್ರಕೃತಿ ಸೌಂದರ್ಯದ ಸೃಷ್ಟಿಕರ್ತನನ್ನು ಹುಡಕಲು ಹೋಗದೆ ಸುಮ್ಮನೆ ಅನುಭವಿಸುವುದೇ ಲೇಸು ಅಲ್ಲವೆ? ಸೊಗಸಾದ ಕವನ.