ವೇದ ಸುಳ್ಳಾದರೂ ಗಾದೆ ಸುಳ್ಳಾಗದು
ಜನಪದರ ಅನುಭವದ ನುಡಿಗಳೇ ಗಾದೆಯು
ಜನಸಾಮಾನ್ಯರ ಬಾಳಿಗಿವುಗಳೇ ದೀವಿಗೆಯು
ವೇದ ಸುಳ್ಳಾದರೂ ಗಾದೆಗಳೆಂದು ಸುಳ್ಳಾಗದು
ಗಾದೆಗಳರಿತವರ ಬಾಳು ಬಂಗಾರವಾಗುವುದು.
*ಅ*ಲ್ಪ ವಿದ್ಯೆ ಮಹಾಗರ್ವಿಯಂತಾಗದಿರು
*ಆ*ಳಾಗಿ ದುಡಿ, ಅರಸನಾಗಿ ಬಾಳುತಿರು
*ಇ*ರುಳು ಕಂಡ ಬಾವಿಗೆ ಹಗಲು ಬೀಳದಿರು
*ಈ*ಜು ಮರೆಯದಿರು, ಜೂಜು ಕಲಿಯದಿರು.
*ಉ*ಪ್ಪುಂಡ ಮನೆಗೆ ದ್ರೋಹ ಬಗೆಯದಿರು
*ಊ*ಡದ ಆವಿಗೆ ಉಣ್ಣದ ಕರುವ ಬಿಡದಿರು
*ಋ*ಷಿ, ಸ್ತ್ರೀ, ನದಿಗಳ ಮೂಲವ ಕೇದಕದಿರು
*ಎ*ಚ್ಚರ ತಪ್ಪಿ ಮಾತಾಡಿ ಹುಚ್ಚನಂತಾಗದಿರು.
*ಏ*ತಿ ಅಂದರೆ ಪ್ರೇತಿ ಎನ್ನುವರಿಂದ ದೂರವಿರು
*ಐ*ದು ಬೆರಳು ಸಮವಿರದೆಂಬುದ ಮರೆಯದಿರು
*ಒ*ಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ತಿಳಿದಿರು
*ಓ*ಣಿ ಮಕ್ಕಳಂತಾಗು, ಕೋಣೆ ಮಕ್ಕಳಂತಾಗದಿರು.
*ಔ*ದಾರ್ಯವಿರದ ಬಾಳು ಗೋಳೆಂಬುದರಿತಿರು
*ಅಂ*ಗೈ ಹುಣ್ಣಿಗೆ ಕನ್ನಡಿಯ ಹಿಡಿದು ನೋಡದಿರು
*ಅಃ* ಗಾದೆಗಳ ಅಮೃತವ ಸವಿಯುವುದ ಬಿಡದಿರು
ಗಾದೆಗಳಿಂದ ಕಟ್ಟಿದ ಕವನವ ಸದಾ ಗುನುಗುತಿರು.
-ಶಿವಮೂರ್ತಿ.ಹೆಚ್ , ದಾವಣಗೆರೆ.
ನಮಸ್ಕಾರ
ಎಷ್ಟು ಚೆನ್ನಾಗಿ ಹೊಂದಿಸಿ ಬರೆದಿದ್ದೀರಿ,
ಗಾದೆಗಳು ಉಳಿಯಿತು, ಕವನಗಳು ಬೆಳೆಯಿತು
ಸಹೃದಯ ವಿಮರ್ಶಕ ನುಡಿಗಳಿಗೆ ಧನ್ಯವಾದಗಳು ಮೇಡಂ
ಚೆನ್ನಾಗಿದೆ ಬರಹ.ಧನ್ಯವಾದಗಳು
ಹೃತ್ಪೂರ್ವಕ ಧನ್ಯವಾದಗಳು ಸರ್
ಉತ್ತಮ ಪ್ರಯೋಗ ಸುಲಭರೀತಿಯಲ್ಲಿ ಗಾದೆಗಳು ಅನಾವರಣ ಅರ್ಥಪೊರ್ಣವಾಗಿ ಮೂಡಿ ಬಂದಿದೆ ಸಾರ್.
ಸಹೃದಯ ವಿಮರ್ಶಕ ನುಡಿಗಳಿಗೆ ಧನ್ಯವಾದಗಳು ಮೇಡಂ
ಎಕ್ಸಲೆಂಟ್
ಹೃತ್ಪೂರ್ವಕ ಕೃತಜ್ಞತೆಗಳು ಮೇಡಂ
ದಾನಿಗಳನ್ನು ಮುತ್ತಿನಂತೆ ಪೋಣಿಸಿದ್ದೀರ
ವಂದನೆಗಳು
ನಿಮ್ಮ ಸಹೃದಯ ವಿಮರ್ಶಕ ನುಡಿಗಳಿಗೆ ಧನ್ಯವಾದಗಳು ಮೇಡಂ
ಅಕ್ಷರಮಾಲೆಯಲ್ಲಿ ಗಾದೆಗಳ ಕವನದ ಹೊಸ ಪ್ರಯೋಗ ನಿಜಕ್ಕೂ ಶ್ಲಾಘನೀಯ..ಧನ್ಯವಾದಗಳು ಸರ್.
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು ಸರ್
ತುಂಬಾ ಚೆಂದದ ಅಕ್ಷರಮಾಲೆಗಳನ್ನೊಳಗೊಂಡ ಗಾದೆ ಕವನ….ಹೀಗೆ ಜೋಡಿಸಲು ತುಂಬಾ ಶ್ರಮಪಟ್ಟಿದ್ದೀರಾ ಸರ್…ಆ ನಿಮ್ಮ ಶ್ರಮಕ್ಕೆ ಇಗೋ ನನ್ನದೊಂದು ನಮನ
ಅಕ್ಷರಮಾಲೆಗಳನ್ನೊಳಿಂದ ಹೆಣೆದ ಸುಂದರ ಗಾದೆ ಕವನ….ಹೀಗೆ ಹೆಣೆಯಲು ತುಂಬಾ ಶ್ರಮ ಬೇಕು…ಆ ನಿಮ್ಮ ಶ್ರಮಕ್ಕೆ ಇದೋ ನನ್ನದೊಂದು ನಮನ