ಮುನ್ನ
ನೇಸರ ಮೂಡುವ ಮುನ್ನ
ಹಾಸಿಗೆ ಬಿಟ್ಟು ಏಳಬೇಕು
ಹೊಸಿಲು ದಾಟುವ ಮುನ್ನ
ಪಶುಪತಿಯ ನೆನೆಯಬೇಕು.
ತಾಸು ಕಳೆಯುವ ಮುನ್ನ
ಕಾಸನು ದುಡಿದು ಗಳಿಸಬೇಕು.
ಉಸಿರು ನಿಂತು ಹೋಗುವ ಮುನ್ನ
ಹಸುವಂಗೆ ನಾವು ಬಾಳಬೇಕು.
ಐಸಿರಿ ಬರಿದಾಗುವ ಮುನ್ನ
ತುಸು ದಾನಧರ್ಮ ಮಾಡಬೇಕು
ನಸೀಬು ಕೈಕೊಡುವ ಮುನ್ನ
ರಿಸಿಯಂತೆ ನಾವಾಗಬೇಕು.
ಹುಸಿ ನುಡಿಯಾಡುವ ಮುನ್ನ
ವಸಿ ಯೋಚಿಸಿ ಆಡಬೇಕು
ಕೆಸರು ಎರಚುವ ಮುನ್ನ
ಕಸಿವಿಸಿಯಾಗುವುದ ತಿಳಿಬೇಕು.
ಮೊಸರು ಮಜ್ಜಿಗೆ ಮಾಡುವ ಮುನ್ನ
ಕಡೆದು ಬೆಣ್ಣೆಯ ತೆಗೆಯಬೇಕು.
ಸಸಿಯ ಬೀಜ ಬಿತ್ತುವ ಮುನ್ನ
ಕೃಷಿ ಭೂಮಿಯ ಸತ್ತ್ವವರಿಯಬೇಕು.
ಬಾಳಿನ ಗುರಿಯ ಶಿಖರವೇರುವ ಮುನ್ನ
ಕಲ್ಲುಮುಳ್ಳಿನ ದಾರಿಯ ತುಳಿಯಬೇಕು
ಶಿವನ ಮಾತಿಗೆ ಹೌದೆನ್ನುವ ಮುನ್ನ
ಜೀವನ ತತ್ತ್ವಗಳನು ಪಾಲಿಸಬೇಕು.
-ಶಿವಮೂರ್ತಿ.ಹೆಚ್ , ದಾವಣಗೆರೆ.
ಸೊಗಸಾದ ಕವನ. ಮೌಲ್ಯಯುತ ಬದುಕಲ್ಲಿ ಅನುಸರಿಸಬೇಕಾದ ಸರಳ, ಸುಂದರ ವಿಚಾರಗಳು
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ.
ಅರ್ಥಪೂರ್ಣ
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ
ಸರಳ ನಿರೂಪಣೆಯ ಸುಂದರ ಕವನ.
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ
ಮುನ್ನ,,,, ಹೌದು,,, ಎಲ್ಲರೂ ಒಮ್ಮೆ ಯೋಚಿಸಿ,
ಪಾಲಿಸಬೇಕು,,,
ವಿದ್ಯಾ
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಸದಾ ಚಿರ ಋಣಿ ಮೇಡಂ
ಬದುಕಿನಲ್ಲಿ ಯಾವುದಕ್ಕೆಲ್ಲಾ ಪ್ರಾಮುಖ್ಯತೆ ಕೊಡಬೇಕೆನ್ನುವುದರ ಬಗೆಗೆ ತಮ್ಮ ಸೂಕ್ಷ್ಮ, ಸಂವೇದನಾಪೂರ್ಣ ಕವನವು ಮನಮುಟ್ಟುವಂತೆ ತಿಳಿಯಪಡಿಸಿದೆ.
ಧನ್ಯವಾದಗಳು ಸರ್