ಬೆಳಕು-ಬಳ್ಳಿ - ಸಂಪಾದಕೀಯ

ಪ್ರೀತಿಯ ಪಿಸುಮಾತು

Share Button

ಹೇಳಿಬಿಡಲೇನು ಮನದ ಇಂಗಿತವ
ಸುತ್ತು ಬಳಸುವುದೇನು ನಿನ್ನೊಡನೆ

ಬೆನ್ನಿಗಾತು ಕುಳಿತು ಪಿಸುಗುಟ್ಟುವ
ಚಡಪಡಿಕೆ , ಬಚ್ಚಿಟ್ಟ ಮಾತುಗಳಿವು
ಉಳಿದ ಕಾರಣವೇನೋ ತಿಳಿದಿಲ್ಲ
ಕೊಪ್ಪರಿಗೆಯಷ್ಟು ಕನವರಿಕೆಗಳಿವೆ

ನಿನ್ನ ಪ್ರೀತಿಯಲ್ಲಿ ಬಂಧಿ ನಾನು
ಖುಷಿಯ ಕಬಳಿಸಲೆಂದೇ ನಿರುಕಿಸುತ್ತಿರುವೆ
ಹೃದಯಾಂತರಾಳದಲ್ಲಿ ಖೈದಿಯಾಗಿರುವೆನು
ಖುಲಾಸೆಯ ಗೊಡವೆ ಎನಗಿಲ್ಲ

ದೂರದಿ ಮುಗುಳುನಗೆ ಹೊತ್ತ
ರಜನೀಶನೂ ಮತ್ಸರದಿ ಇಣುಕುತಿಹನು
ನಮ್ಮೊಲವಿನ ಗಾಢತೆಗೆ ಸಾಕ್ಷಿಯಾಗಿ
ಮನದಿಚ್ಚೆಯ ಮನ್ನಿಸೊಮ್ಮೆ ನನ್ನಿನಿಯ

ಮನಸಿನ ಜಪವೂ ನಿನ್ನದೇ ಸದಾ
ಗಮನಿಸದೆ ದೂರ ಸರಿಯುವ ಇರಾದೆ ಏಕೆ?
ನಿನ್ನ ಪ್ರೇಮ ಸಾನಿಧ್ಯದ ಹೊರತು
ಬೇರೆ ಬಿಡಾರವೇನಿದೆ ನನಗೆ

ಹೇಳಿಬಿಡಲೇನು ಮನದ ಇಂಗಿತವ
ಸುತ್ತು ಬಳಸುವುದೇನು ನಿನ್ನೊಡನೆ
ಅನುಗಾಲಕೂ ಒಲವ ಸಿಂಚನದ
ಬಯಕೆಯೊಂದೇ ನನ್ನ ಮನಕೆ

-ಸರಿತಾ ಮಧು , ನಾಗೇನಹಳ್ಳಿ

11 Comments on “ಪ್ರೀತಿಯ ಪಿಸುಮಾತು

  1. ಕೊಪ್ಪರಿಗೆಯ ಕನವರಿಕೆಗಳ ನಿಧಿ ನನಸಾಗಲಿ.ಒಂದೊಳ್ಳೆ ಕವನ.

  2. ಮನದ ಮಾತು ಪಿಸು ಮಾತಾಗಿ ಹೇಳಲೇಬೇಕು.ಸುಂದರ ಕವನ ಸಹೋದರಿ

  3. ಅರ್ಥಪೂರ್ಣ ಕವನ ಧನ್ಯವಾದಗಳು ಮೇಡಂ

  4. ಸುಂದರ ಕವನ ಮನದಮಾತು ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಗೆಳತಿ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *