ಹೊಸ ವರುಷ

Share Button

ಬರಲಿದೆ ಹೊಸ ವರುಷ
ತರಲಿ ಎಲ್ಲರ ಬಾಳಲಿ ಹರುಷ
ನೋವು ದ್ವೇಷಗಳ ಕಳೆದು
ಸ್ನೇಹ ಸಂಬಂಧವ ಕೂಡುತ

ಶುರುವಾಗಲಿ ಸುಖದ ಪರ್ವವು
ಮೊಳಗಲಿ ಕೀರ್ತಿ ಅನಂತವು
ಬರಲಿ ಹೊಸ ವರುಷ ಬಾಳಲಿ

ಹೊಸ  ಚೈತನ್ಯ ಮೂಡಲಿ
ಗುರಿಯ ತಟ ಸನಿಹವಾಗಲಿ
ಸಕಲವೂ ಶುಭವಾಗಲಿ

ಗತಿಸಿದ ಅವಮಾನಗಳೆಲ್ಲವೂ
ಸನ್ಮಾನವಾಗಿ ಸಜ್ಜನರ ಮುಡಿಗೇರಲಿ
ಬರಲಿ ಹೊಸ ವರುಷ ಬಾಳಲಿ

ಕಷ್ಟಗಳನು ತಳ್ಳೋಣ ಪಾಳು ಗುಂಡಿಗೆ
ಸಕಲಗಳನು ಮೆಟ್ಟುವ ಮೂಡಲಿ ಗುಂಡಿಗೆ
ಇಷ್ಟಗಳನು ಸಾಧಸಿ ಹಂಚೋಣ ಮಂಡಿಗೆ

ಛಲವು ಮೂಡಲಿ ಮೊಗದಲಿ
ಫಲವು ದೊರೆಯಲಿ ಯುಗದಲಿ
ಬರಲಿ ಹೊಸ ವರುಷ ಬಾಳಲಿ

ಒಣಗಿದ ಬೀಜ
ಭುವಿಯ ನೀರಿನ ಸೆಲೆಗೆ ಸಿಕ್ಕು
ಮೊಳೆತು ಹಸಿರಾಗುವಂತೆ

ಬಂಜೆಯ ಒಡಲಲಿ
ಹೊಸ ಜೀವದ ಸುಳಿವಿನ
ಖುಷಿಯ ಕೊಟ್ಟಂತೆ
ಸುಡು ಬಿಸಿಲಲಿ ವರುಣ
ಧರೆಗೆ ಹನಿಹನಿಗಳ
ಧಾರೆ ಎರೆದಂತೆ

ಜೊತೆಯಾಗಲಿ ಬರುವ ದಿನಗಳು
ನಮ್ಮೆಲ್ಲರನು ಸ್ವಾಗತಿಸಿ
ಸುಖದ ಹೂ ಮಳೆಗೈವಂತೆ

ಬರಲಿ ಹೊಸ ವರುಷ ಬಾಳಲಿ
ತರಲಿ ಹರುಷವ ಬರುವ ದಿನಮಾನಗಳಲಿ.

 ಶಿವಾನಂದ್ ಕರೂರ್ ಮಠ್,  ದಾವಣಗೆರೆ.

16 Responses

  1. Anonymous says:

    nice

  2. Chethana Kotian says:

    ….. ಹೊಸ ವರ್ಷದ ಶಭಾಶಯಗಳು ಸರ್

  3. RanjithaM R says:

    Very nice …..and meaningful

  4. Habeeb says:

    Very nice bro

  5. Prakash M R says:

    Superb & meaningful

  6. ನಯನ ಬಜಕೂಡ್ಲು says:

    ಸುಂದರ ಶುಭಾಶಯ. ನಿಮಗೂ ಹೊಸ ವರ್ಷದ ಶುಭಾಶಯಗಳು ಸರ್.

  7. sam says:

    superb sir

  8. Usha Kumar says:

    ಕವನ ತುಂಬಾ ಚನ್ನಾಗಿದೆ ಸರ್ ಹಾಗೂ ನಿಮಗೂ ಹೊಸ ವರ್ಷದ ಶುಭಾಶಯಗಳು

  9. Usha Kumar says:

    ಕವನ ತುಂಬಾ ಚನ್ನಾಗಿದೆ ಸರ್

  10. ಶಂಕರಿ ಶರ್ಮ, ಪುತ್ತೂರು says:

    ಉತ್ತಮ ಹೊಸ ಆಶಯಗಳನ್ನು ಹೊತ್ತ ಸೊಗಸಾದ ಕವನ…ಹೊಸವರ್ಷದ ಶುಭಾಶಯಗಳು ತಮಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: