ಹೊಸ ವರ್ಷದ ಸಂಭ್ರಮ

Share Button

ಎಂಥ ಆನಂದ! ಏನು ಆಹ್ಲಾದ!
ಇಂದು ಈ ದಿನ…
ಹೊಸ ವರುಷದ ಮೊದಲ ದಿನ;
ತುಂಬಿದೆ ಹರುಷ ನಿತ್ಯ ನೂತನ.

ಶಾಶ್ವತ ವಿದಾಯ ಹೇಳಿದೆ;
ನನ್ನೆಲ್ಲಾ ಕಹಿ ನೆನಪುಗಳಿಗೆ.
ಹೊಸ ಹುರುಪಿನಲಿ ಸ್ವಾಗತಿಸಿದೆ;
ನನ್ನೆಲ್ಲಾ ಆಸೆ ಗುರಿ ಕನಸುಗಳಿಗೆ.

ನವೋತ್ಸಾಹ! ನವೋಲ್ಲಾಸ!
ಬೇರೂರಿದೆ ಮನದಿ…
ನವ ಚೈತನ್ಯ ಮೂಡಿತು…
ಈ ಜೀವ ಭಾವದಿ.

ಈ ಬಾಳಿಗೆ ನೀ ತಂದ ಸಂತಸ;
ಹೊತ್ತು ಸಾಗಿದೆ ನೂರು ಕನಸ
ನಿನ್ನ ಬೆಂಬಲವಿರೆ ಪ್ರತಿದಿವಸ;
ಆಗುವುದು ಎಲ್ಲ ನನಸ.

– ಮೇಘನಾ ದುಶ್ಯಲಾ, ಹುಬ್ಬಳ್ಳಿ

3 Responses

  1. ನಯನ ಬಜಕೂಡ್ಲು says:

    ವಾವ್. ನಿಮ್ಮನ್ನು ಇಲ್ಲೂ ನೋಡಿ ತುಂಬಾ ಖುಷಿ ಆಗ್ತಿದೆ ಗೆಳತಿ. ಚಂದದ ಕವನ.

  2. Dharmanna dhanni says:

    ಅರ್ಥಪೂರ್ಣವಾದ ಸಾಲುಗಳು. ಹೊಸ ವರ್ಷದ ಸ್ವಾಗತ ಕವನ ಸುಪರ್ …..

  3. ಶಂಕರಿ ಶರ್ಮ, ಪುತ್ತೂರು says:

    ಹೊಸ ವರ್ಷವನ್ನು ತುಂಬು ಪ್ರೀತಿ,ಮಗೆ ಉತ್ಸಾಹದಿಂದ, ಸೊಗಸಾದ ಕವನದ ಮೂಲಕ ಬರಮಾಡಿಕೊಂಡ ಮೇಘನಾ ಮೇಡಂ..ತಮಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: