ಅ.. ಸಾರ್ಥಕ ..ಅಃ
ಅ ನ್ಯರ ಸ್ವತ್ತಿಗೆ
ಆ ಸೆ ಪಡುತ್ತ
ಇ ರುವ ಮನುಜರ
ಈ ಶ್ವರ ಮೆಚ್ಚಲಾರ.
ಉ ತ್ತಮರಾಗದಿದ್ದರೆ
ಊ ರುಭಂಗ ಖಚಿತ
ಋ ಷಿಯಂಗೆ ಬಾಳಿದರೆ
ಎ ಲ್ಲೆಡೆ ಸಲ್ಲುವೆ ನಿಶ್ಚಿತ.
ಏ ನಿದ್ದರೇನು ಕೊನೆಗೆ
ಐ ಕ್ಯವಾಗಬೇಕು ಮಣ್ಣಲ್ಲಿ
ಒ ಲವೇ ಅಮೃತ ಬಾಳಿಗೆ
ಓ ಮನುಜ ತಿಳಿದು ಬಾಳಿಲ್ಲಿ.
ಔ ದಾರ್ಯದಿ ನಡೆಯುತ
ಅಂ ತಕನೊಡೆಯ ಭಜಿಸುತ
ಅಃ ಅನವರತ ಬದುಕಿದರೆ
ನರಜನ್ಮ ಸಾರ್ಥಕವು ಖಂಡಿತ.
-ಶಿವಮೂರ್ತಿ.ಹೆಚ್. ದಾವಣಗೆರೆ.
ಸೂಪರ್.
ಧನ್ಯವಾದಗಳು ಮೇಡಂ
ಅಕ್ಷರಮಾಲೆಯ ಮಣಿಹಾರ ಚೆನ್ನಾಗಿದೆ.
ಧನ್ಯವಾದಗಳು ಗುರುಗಳೇ
ಅಕ್ಷರ ಮಾಲೆ ಪೋಣಿಸಿದ್ದು ತುಂಬಾ ಚೆನ್ನಾಗಿದೆ
ಧನ್ಯವಾದಗಳು ಮೇಡಂ