ಮರೆಯಬೇಡ
ತಾಯ್ತಂದೆಯರ ಕೀಳಾಗಿ
ಕಾಣಬೇಡವೋ ಮೂಢನೇ
ತಾಯ್ತಂದೆಯರಿಂದಲೇ ಜಗಕ್ಕೆ
ಬಂದಿರುವೆಂಬುದನು ಮರೆಯಬೇಡ.
ಬಹು ಭಾಷೆಗಳ ಕಲಿತಿರುವೆಂದು
ಗರ್ವ ಪಡದಿರು ಹೇ ಮೂರ್ಖನೇ
ಮನದ ಭಾವನೆಗಳ ಅಭಿವ್ಯಕ್ತಿಗೆ
ಮಾತೃಭಾಷೆಯೇ ಬೇಕು ಮರೆಯಬೇಡ.
ಆಸ್ತಿ ಅಂತಸ್ತು ಅಧಿಕಾರ ಬಂದೊಡನೆ
ಹಸ್ತಿ ಮದವೇರಿದಂತಾಗದಿರು ಪೆದ್ದನೇ
ವಸ್ತುಗಳ ಮೋಹದಿ ಸಂಬಂಧಗಳ ಮರೆತರೆ
ಅಸ್ಥಿಯಾಗುವೆ ಕೊನೆಗೆ ಮರೆಯಬೇಡ.
ಗುರು ಹಿರಿಯರು ಹೇಳಿದ ಮಾತುಗಳನು
ಗೌರವದಿ ಪಾಲಿಸದಿದ್ದರೆ ಹೆಡ್ಡನೇ
ಹರನ ಕೃಪೆಯಿಂದ ವಂಚಿತನಾಗುವೆ
ನೀರ ಮೇಲಣ ಗುಳ್ಳೆಯಂತಾಗುವೆ ಮರೆಯಬೇಡ.
-ಶಿವಮೂರ್ತಿ.ಹೆಚ್ , ದಾವಣಗೆರೆ.
ಕವನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಕವನವನ್ನು ಮೆಚ್ಚಿ, ಪ್ರೋತ್ಸಾಹ ನೀಡುತ್ತಿರುವ ಓದುಗ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು
ಉತ್ತಮ ಸಂದೇಶ ಸರ್
ಧನ್ಯವಾದಗಳು ಮೇಡಂ..
ಬದುಕುವ ರೀತಿಯನ್ನು ತಿಳಿಯಪಡಿಸಿ, ತಪ್ಪು ದಾರಿ ತುಳಿಯದಂತೆ ಎಚ್ಚರಿಸುವ ಧ್ವನಿ ತುಂಬಿದ ಸೊಗಸಾದ ಕವನ.
ಧನ್ಯವಾದಗಳು
ಸೊಗಸಾದ ಕವನ.
ಧನ್ಯವಾದಗಳು ಮೇಡಂ.. ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಅನಂತ ಚಿರ ಋಣಿ
Super
ಧನ್ಯವಾದಗಳು
Super sir
ಧನ್ಯವಾದಗಳು
Super sir
ಧನ್ಯವಾದಗಳು
Super sir
ಧನ್ಯವಾದಗಳು ಮೇಡಂ