ನಾವು ಕನ್ನಡಿಗರು
ನಾವು ಕನ್ನಡಿಗರು
ಕರುನಾಡ ಕುಡಿಗಳು
ಕನ್ನಡ ಉಸಿರೆಂದವರು
ಕನ್ನಡ ಉಸಿರೇ ಎಂದವರು.
ಕರುನಾಡ ಮೇಲೆರಗಿ
ಬಂದಂತ ವೈರಿಗಳ
ಧಮನ ಮಾಡದೇ ತಿರುಗಿ
ಬಿಡುವವರೆಂದು ಅಲ್ಲ.
ನಾವು ಕನ್ನಡಿಗರು
ಕರುನಾಡ ಕುಡಿಗಳು
ಬರಡು ನೆಲದಲ್ಲೂ
ಹೂವ ಅರಳಿದವರು
ನೊಂದ ಮನಗಳಿಗೆ
ಜೀವ ಗಂಗೆಯಾದವರು
ನಾವು ಕನ್ನಡಿಗರು
ಕರುನಾಡ ಕುಡಿಗಳು
ಈ ಪದ ಪುಂಜದಲಿ
ಕಾವ್ಯವನ್ನು ಅರ್ಪಿಸಿ
ಮೌನದಲಿ ನಕ್ಕವರು
ನಾವು ಕನ್ನಡಿಗರು
ಕರುನಾಡ ಕುಡಿಗಳು
-ಉಮೇಶ ಮುಂಡಳ್ಳಿ, ಭಟ್ಕಳ
ಚೆನ್ನಾಗಿದೆ
ಕರುನಾಡ ಕಲಿಗಳ ಮಹತ್ತರವಾದ ಹಿರಿಮೆ ಗರಿಮೆ ಸೊಗಸಾದ ಕವನ ರೂಪದಲ್ಲಿ ಮೂಡಿಬಂದಿದೆ.