ಆಹಾರ ವಿಹಾರ
ಪ್ರತಿದಿನದ ಜಂಜಾಟದ ಜೀವನದಲಿ
ಮರೆತೆವು ದೇಹದಾರೋಗ್ಯದ ಗಮನ
ಬಿಡುವಿಲ್ಲದ ಕೆಲಸದ ಚಿಂತೆಯಲಿ
ಮೊರೆಹೋಗುವೆವು ಫಾಸ್ಟ್ ಫುಡ್ ಭವನ
ಪಿಜ್ಜಾ ಬರ್ಗರ್ ಚಾಟ್ ಸೇವನೆಯಿಂದ
ಏರುಪೇರಾಗುವುದು ದೇಹದೊಳಗೆ
ಸಾವಯವ ಸೊಪ್ಪು ಹಣ್ಣು ತರಕಾರಿಗಳಿಂದ
ಶುದ್ಧ ಆರೋಗ್ಯವಿರುವುದು ಅಂಗೈಯೊಳಗೆ
ಅರಿಯದೆ ಹೋಯಿತು ಪೌಷ್ಟಿಕ ಆಹಾರದ ಮಾಹಿತಿ
ಸಿಕ್ಕಿದ್ದನ್ನು ತಿಂದರೆ ಆಗುವುದು ಫಜೀತಿ
ಜೀವನಶೈಲಿಯ ನಿರ್ವಹಣೆಯ ಹುರುಪಿನಲಿ
ಸಮತೋಲನ ಆಹಾರ ಇರಲಿ ಪರಿಧಿಯಲಿ
ಬಿಸಿಲಬೇಗೆಯಲಿ ಬೆಂದ ರೈತರಿಗೆ ಸಲ್ಲಬೇಕು ನಮನ
ಆಹಾರ ಪೋಲಾಗುವುದರ ಕಡೆಗೆ ಇರಲಿ ಗಮನ
ಹಸಿದವರ ಹೊಟ್ಟೆಗೆ ಸಿಗಲಿ ಶಾಶ್ವತ ಶಮನ
ನಡೆಸೋಣ ಸದೃಢ ಆರೋಗ್ಯ ಜೀವನ
– ಆಶಾ ಅಡೂರ್, ಉಜಿರೆ
ಆರೋಗ್ಯವೇ ಭಾಗ್ಯ ಅನ್ನುವುದನ್ನು ಹಿಡಿದಿಟ್ಟ ಸಾಲುಗಳು ಬ್ಯೂಟಿಫುಲ್.
Thanks
ಆರೋಗ್ಯ ಕರ ಅಹಾರದ ಮಹತ್ವ ಸಾರುವ ಸೊಗಸಾದ ಕವನ
ಧನ್ಯವಾದಗಳು
ಚೆನ್ನಾಗಿದೆ
Super
Thanks
ಧನ್ಯವಾದಗಳು