ನನ್ನ ಜಾಗವೆ ಇಲ್ಲೆ
ಒಳಗಿನೊಳಗಿನ ಭಾವ ನಿರ್ವಾಣ ಬೀಜದಲಿ
ಬೀಡುಬಿಟ್ಟು ಸದ್ದುಗದ್ದಲ ತೊರೆದು
ಮಾತ ಸೊಕ್ಕಡಗಿ ಮೌನ ಬಾಗಿಲ ತೆರೆದು
ಬಯಲಲ್ಲಿ ಬಯಲಾಗಿ ಬೆಳಕಲ್ಲಿ ಬೆಳಕಾಗಿ
ಹಗುರ ಹೂವಿನ ಹಗುರ
ಹಗುರ ಗಾಳಿಯ ಹಗುರ
ಹಗುರ ಪ್ರಾಣದ ಹಗುರ
ಆಹ! ನನ್ನ ಜಾಗವೆ ಇಲ್ಲೆ!
ನಾನಲ್ಲಿ ಒಲ್ಲೆ!
-ಡಾ. ಮಹೇಶ್ವರಿ ಯು, ಕಾಸರಗೋಡು
ವಾಸ್ತವ ಇದೆಂದೇ ಅರ್ಥವಾದಾಗ ಸಿಗುವ ನಿರಾಳ ಭಾವ. ಚೆನ್ನಾಗಿದೆ ಕವನ.
ವಿನಮ್ರತೆಯ ಭಾವದ ನಿರಾಳತೆ ಸೂಚಿ ಸುವ ಕವನ.ಚೆನ್ನಾಗಿದೆ ಮೇಡಂ ಅಭಿನಂದನೆಗಳು.
ನಿರ್ಭಾವದ ನಿರಾಳತೆಯನ್ನು ಸೂಸುವ ಸುಂದರ ಕವನ.