ತಂಗುದಾಣ ಬೇಕು
ಓಡುತ್ತಿರುವ ಸಮಯದಿಂದ
ಎದುರಾಗುವ ಹೊಸ ಹೊಸ
ಬೇಗುದಿಗಳಿಂದ ಅರೆಕ್ಷಣ ವಿರಮಿಸಲು
ನಿಂತು ನೆಮ್ಮದಿ ಪಡೆಯಲು
ತಿಂದುಂಡು ಮಲಗಿ
ಅದೇ ಮಾತು ಅದೇ
ಕೆಲಸ ಮಾಡಿ ಮಾಡಿ
ತುಸು ಹೊತ್ತು ಮನ ವಿರಮಿಸಲು
ತಂಗುದಾಣ ಬೇಕು
ಆ ಮನೆ ಈ ಮನೆ
ಕತೆ ಕೇಳಿ ಅವರಿವರ
ಗುಣಗಾನ ಮಾಡುವ ಬದಲು
ನಮ್ಮನ್ನು ನಾವೇಅವಲೋಕನ ಮಾಡಿಕೊಳ್ಳಲು
ಒಂದು ತಂಗುದಾಣ ಬೇಕು
ಎಲ್ಲರಲ್ಲಿಯೂ ತಪ್ಪುಗಳ
ಹುಡುಕಿ , ಇಲ್ಲಸಲ್ಲದ್ದನ್ನು
ತಲೆಯಲ್ಲಿ ತುಂಬಿಸಿ
ತಲ್ಲಣಿಸುವ ಮನಕ್ಕೊಂದು
ಶಾಂತಿಯ ಅಂಗಳದ ತಂಗುದಾಣ ಬೇಕು
ಟೀಕೆ ಟಿಪ್ಪಣಿ ಗಳ ಜಂಗುಳಿಯಲ್ಲಿ
ತನ್ನ ತಾ ಮರೆತ ಬದುಕಿಗೆ
ಸ್ಪೂರ್ತಿಯ ತುಂಬುವ
ತಣ್ಣನೆಯ ತಂಗಾಳಿಯ ತಂಗುದಾಣ ಬೇಕು
– ರೇಶ್ಮಾ ಗುಳೇದಗುಡ್ಡಾಕರ್
ನೈಸ್.
ತಂಗುದಾಣ ಬೇಕು ಕವನದ ಆಶಯ ಚೆನ್ನಾಗಿದೆ ಮೂಡಿ ಬಂದಿದೆ.ಆದರೆ ತಂಗುದಾಣ ನಾವೇ ಮಾಡಿಕೊಳ್ಳಬೇಕು
ಅಭಿನಂದನೆಗಳು
ಸೊಗಸಾದ ಕವನ
ಕವನ ಮೆಚ್ಚಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲಾ ಕವಿನಮಗಳು ಧನ್ಯವಾದಗಳು