ಬದಲಾದ ಹೆಣ್ಣು , ಬದಲಾಗು ಹೆಣ್ಣೇ
ಓ ಹೆಣ್ಣೇ ಹಿಂದೊಮ್ಮೆ ನೀನಾಗಿದ್ದೆ
ಪತಿವ್ರತಾ ಶಿರೋಮಣಿ
ಯುಗ ಉರುಳಿದಂತೆ – ಕಾಲ ಕಳೆದಂತೆ
ನೀನಾದೆ ಸತಿಸಾವಿತ್ರಿ
ಸಮಯ ಹೋದ ಹಾಗೇ ನೀನು
ಒನಕೆ ಓಬವ್ವನು ಆದೆ
ಹೊಸ ಸಂವತ್ಸರಗಳು ಸಾಗಿದಂತೆ
ಇಂದಿರಾ ಆಗಿ ಆಳ್ವಿಕೆ ಮಾಡಿದೆ
ನವಯಗದಲ್ಲಿ ಕಲ್ಪನಾ ಚಾವ್ಲಾ ಆಗಿ
ಆಗಸದೆತ್ತರಕ್ಕೆ ಹೋದೆ
ಆದರೇ ಈ ಆಧುನಿಕ ವರ್ಷದಲ್ಲಿ
ನೀನು ಮಾದಕ ವ್ಯಸನಿ ಆಗಿ
ಹೆಣ್ತನ ಮರೆತು ಧನದಾಹಿಯಾಗಿ-ಪುರುಷದಾಹಿಯಾಗಿ
ಕಾರಾಗೃಹವಾಸಿಯಾದೆ-ಲಜ್ಜೆಗೇಡಿಯಾದೆ!
ಇನ್ನಾದರೂ ಬದಲಾಗು ಮಹಾಸಾದ್ವಿಯಾಗಿ
ಶಾರದಾ ಮಾತೆಯ ಹಾಗೇ ಪವಿತ್ರಳಾಗಿ ,
ಪರಿವರ್ತನಾ ಜನ್ಮವಾಗಿ – ಪೂಜನೀಯವಾಗಿ ,
ಬದಲಾಗು ಹೆಣ್ಣೇ – ಸಮಾಜದ ಕಣ್ಣೇ……
– ಮೇಘನ ಪ್ರಶಾಂತ್ ಹೊಳ್ಳ, ಬೈಪಾಡಿ
ಸರಿಯಾಗಿ ಹೇಳಿದ್ದೀರಿ ಮೇಘನಾ… ಗಂಡಿಗೆ ಸಮವಾಗಿ ನಿಲ್ಲಬೇಕೆಂದು ಹೊರಟ ಹೆಣ್ಣು, ಗಂಡಿಗಿಂತ ಮಿಗಿಲಾದ ತನ್ನ ಗರಿಮೆಯನ್ನು ಮರೆತಿದ್ದಾಳೆ.
ಧನ್ಯವಾದಗಳು ಅಕ್ಕ
ವಾಸ್ತವದ ಅನಾವರಣ,
ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವಲೋಕನ ಹಾಗೇ ಎಚ್ಚರಿಕೆಯ ದ್ವನಿ.ಅಭಿನಂದನೆಗಳು.
ಎಚ್ಚರಿಕೆಯ ಗಂಟೆ ಮೊಳಗಿಸುವ ಧ್ವನಿ ಪಡೆದಿರುವ ಕವನ ಚೆನ್ನಾಗಿದೆ.