ನಾವೆಲ್ಲ ಒಂದೇ ರಾಮಾ..
ರಾಮನನ್ನು ದೇವನ ಮಾಡಿ
ಗುಡಿಯಲಿ ಇಟ್ಟು ಪೂಜಿಸುವ
ರಾಮನ ಜೀವನ ಮಾದರಿ
ಮನದಿ ನೆನೆದು ಜೀವನ ನಡೆಸುವ
ಮಾನವ ಅವತಾರಿ ಶ್ರೀ ರಾಮ
ಗುಡಿಯಲಿ ಇಟ್ಟು ಪೂಜಿಸುವ
ರಾಮನ ಜೀವನ ಮಾದರಿ
ಮನದಿ ನೆನೆದು ಜೀವನ ನಡೆಸುವ
ಮಾನವ ಅವತಾರಿ ಶ್ರೀ ರಾಮ
ಬಿಲ್ಲ ಮುರಿದು ಸೀತೆಯ ಗೆದ್ದು
ನಾಡಿಗೆ ಸಾರಿದ ಶ್ರೀರಾಮ
ಅಹಂ ಮುರಿದು ಶಾಂತಿಗೆಲ್ಲಿ
ಜಪಿಸಿ ರಾಮ ನಾಮ
ಶಾಂತಿಯ ಪ್ರತಿರೂಪ ಶ್ರೀರಾಮ
ಲಂಕೆ ದಾಟಿ ರಾವಣನ ಕೊಂದು
ಹರಸಿದ ಶ್ರೀರಾಮ
ವೈರಿಗಳನ್ನು ಮೆಟ್ಟುವ ಮುಂದೆ
ದಯೆ ಸಾರಿದ ಶ್ರೀರಾಮ
ಮರ್ಯಾದಾ ಪುರುಷೋತ್ತಮ ರಾಮ
ಮಂಗ ಸೈನ್ಯದಿಂದ
ವಿಜಯ ಸಾಧಿಸಿದ ಶ್ರೀರಾಮ
ಮನದಿ ಮಂಗ ಸೈನ್ಯ ವಿರಲು
ವಿಜಯ ಸಾಧ್ಯವೇ ಶ್ರೀರಾಮ ?
ವಿಜಯ ಶಕ್ತಿ ನೀಡು ಶ್ರೀರಾಮ
ರಾಮ ಭಕ್ತ ಹನುಮ ತೋರಿದ
ಹೃದಯದಲ್ಲಿ ಶ್ರೀರಾಮ
ನನ್ನ ಹೃದಯ ನಿಮ್ಮ ಹೃದಯ
ಎಲ್ಲಾ ಆಳಲಿ, ಶ್ರೀರಾಮ
ನಾವೆಲ್ಲಾ ಒಂದೇ ಜೈ ರಾಮ
-ವಂದನಾ ಹೆಗ್ಡೆ
ಚೆನ್ನಾಗಿದೆ. ಜೈ ಶ್ರೀ ರಾಮ್
Jai shree ram ki jai
ರಾಮ ಕಥಾಮೃತ ಹೊತ್ತ ಸಕಾಲಿಕ ಕವನ ತುಂಬಾ ಚೆನ್ನಾಗಿದೆ.