ಭಾವಗಳ ಹಕ್ಕಿ…
ಭಾವಗಳ ಹಕ್ಕಿಗೆ ಹಾರುವುದೇ ಕೆಲಸ
ಒಮ್ಮೆ ಆ ಮರ..ಒಮ್ಮೆ ಈ ಮರ..
ಮಗದೊಮ್ಮೆ…..ಮತ್ತೊಂದು.
ಗಮನಿಸಿದ್ದೇನೆ ನಾನು ಬಗೆ ಬಗೆ ಹಕ್ಕಿಗಳ
ಸಂಜೆ ಹೊತ್ತು ನನ್ನ ಕೈತೋಟದಲ್ಲಿ
ಭಿನ್ನ…ಭಿನ್ನ…ಒಂದೊಂದೂ.
ಕೆಲವು ಗುಂಪು ಗುಂಪುಗಳವಾದರೆ
ಕೆಲವದೋ….ಬರೀ ಗದ್ದಲ,
ಇನ್ನು ಕೆಲವು ಮೌನವಾಗಿದ್ದರೆ..
ಮತ್ತೂ ಕೆಲವು ಬರೀ…ಒಂಟಿ.
ಬಣ್ಣ ಬಣ್ಣದ ರಂಗೋಲಿಯಂತೆ ಕೆಲವಾದರೆ,
ಹಸಿರು ಮಧ್ಯೆ ಐಕ್ಯವಾದಂತೆ ಕೆಲವು
ನಾವಿರುವುದೇ ಹೀಗೆಂಬ ಮಾಸು ಬಣ್ಣದವು ಕೆಲವಾದರೆ,
ಒಂಟಿಯಾಗಿರುವ ಕಪ್ಪು ಹಕ್ಕಿ ಮೇಲೇ….ನನಗೆ ಒಲವು.
ತುಂಬಿ ಗಿಡದಲ್ಲೂ ಕೊಂಬೆ ಕೊಂಬೆಗೆ ಹಾರುವ ಪುಟ್ಟ ಹಕ್ಕಿ,
ಒಂದು ಹೋದಲ್ಲೆಲ್ಲ ಇನ್ನೊಂದೂ ಹೋಗುವ ಜೋಡಿ ಹಕ್ಕಿ,
ಕಾಳು ಕಂಡರೆ ತನ್ನವರ ಕರೆವ ಗುಂಪು ಹಕ್ಕಿ,
ಗಾಜಿನ ಕಿಟಕಿಯ ತೂತು ಮಾಡಿಯೇ ಸಿದ್ಧ ಎಂಬಂತ ಹಠಮಾರಿ ಹಕ್ಕಿ,
ಹೀಗೇ ..ಎಲ್ಲಾ ಹಕ್ಕಿಗಳಲ್ಲಿಯೂ ಕಾಣುವೆಪು ನಾನು ನನ್ನನ್ನೇ..
ನನ್ನದೇ ಭಾವ…ನನ್ನದೇ ನೋವು…ನಲಿವು
ಪ್ರಕೃತಿಯ ಹಾಗೆ…ನಮ್ಮ ನೋಟಕ್ಕೆ ತಕ್ಕಂತೆ ಅದರ ಅರ್ಥ
ಆ ಅರ್ಥ ಹುಡುಕುವ ಏಕಾಂತದತ್ತವೇ…ನನ್ನ ಸೆಳವು.
– ವಿದ್ಯಾ ಶ್ರೀ. ಎಸ್, ಅಡೂರ್
ವಾವ್. ಚೆನ್ನಾಗಿದೆ. ಭಾವದ ಹೋಲಿಕೆ ಹಕ್ಕಿಗಳೊಂದಿಗೆ.
Thankyou
ಭಾವನೆಗಳು ಹಕ್ಕಿಗಳಾಗಿ ನಲಿದಾಡಿದ ಭಾವ ಇಷ್ಟವಾಯಿತು. ಸೊಗಸಾದ ಕವನ.
ಸುಂದರ ಹೆಣಿಗೆ. ಹಕ್ಕಿಗಳ ಬಗ್ಗೆ ಬರೆದರೂ ಮತ್ತೆಲ್ಲಿಗೋ ಒಯ್ಯುವ ಭಾವ ಜಗತ್. ಮುದ್ರಾರಾಕ್ಷಸನ ಕಿರಿಕಿರಿ ಇರಬಾರದಿತ್ತು. ಶುಭಾಶಯಗಳು