ಬೆಳಕು-ಬಳ್ಳಿ

ಆಹಾ!!! ಬಂತು ಸಿಟ್ಟು …

Share Button

ಬಿಸಿರಕ್ತ ಕುದಿಯುತಿದೆ !
ತಲೆ ಸುತ್ತಿ ಕಾಯುತಿದೆ !
ಕೈಕಾಲ್ಗಳದುರುತಿವೆ !
ಎದೆಬಡಿತ ಏರುತ್ತಿದೆ !
ನುಡಿಗಳು ತಡವರಿಸುತಿವೆ !
ಆಹಾ !!!  ಬಂತು ಸಿಟ್ಟು

ನನ್ನ  ಸಿಟ್ಟು ಸಿಂಹಾಸನದಲಿ
ರಾಜನಂತೆ ಕುಳಿತಿದೆ.
ಎದುರು ನಡೆಯುತ್ತಿರುವುದೆಲ್ಲ
ತಪ್ಪಂತೆ ಕಾಣಿಸುತ್ತಿದೆ.
ನಾ ಸಿಟ್ಟುಗೊಳ್ಳುವುದು
ನನ್ನ ಹಕ್ಕೆಂದು ತೋರುತಿದೆ.

ಸಿಟ್ಟು ನನಗೆ ಹೇಳುತಿದೆ ::
“ನಿನ್ನಷ್ಟು ಸರಿ ಯಾರೂ ಇಲ್ಲ.
ನೀನರಿತಿರುವ ಯಾರೂ
ನಿನ್ನಷ್ಟು ಜಾಣರಲ್ಲಾ.
ಬುದ್ದಿ ಹೇಳಬೇಕು ನೀನು
ಈ ಜನರಿಗೆಲ್ಲ”.

ಬಾರಿ ಬಾರಿ ಹೇಳುತಿರುವೆ
ಅವರ ತಪ್ಪನೆತ್ತಿ ತೋರುತಿರುವೆ
ಈ ಜಗತ್ತು ಎಂದು ಅರಿವುದೋ
ಆ ದೇವರೇ ಬಲ್ಲ !!!
ಇವರಿಗಿಂತ ಮೂರ್ಖರಿಲ್ಲ!!

ಅನುಮಾನ, ಮನ ಕೇಳುತಿದೆ-
ನಾ ಎಲ್ಲರಿಗಿಂತ ಜಾಣನದರೂ,
ನನ್ನ ಮನಕೇಕೋ ಸುಖವಿಲ್ಲ ??

ನಿನ್ನೆವರೆಗು ಎಲ್ಲರೂ
ನನ್ನವರಂತೆ ಕಂಡರೂ,
ಇಂದು ನನ್ನ ಸಿಟ್ಟಿನಲ್ಲಿ
ಅಪರಿಚಿತರಂತೆ ಕಂಡರು.

ಈ ದರಿದ್ರ ಸಿಟ್ಟು ಬಂದಿತೇಕೋ ?
ನನ್ನವರ ದೂರ ಮಾಡಿತೇಕೋ?
ಜಾಣನಂತೆ ನನ್ನ ಮೆರೆಸಿ,
ನಿಜದಿ ಮೂರ್ಖನ ಮಾಡಿತು.

ನನ್ನ ಮನದ ಶಾಂತಿ ಕದ್ದ
ಸಿಟ್ಟಿನ ಮೇಲೇ ಸಿಟ್ಟಾಗುವೆ,
ಆ ಸಿಟ್ಟನ್ನೆ  ದೂರ ಓದೆಯುವೆ

ತಲೆಯು ಶಾಂತವಾಯಿತು
ಮನವು ಹಗುರವಾಯಿತು
ನುಡಿಗಳು ಹಾಡಾಯಿತು

“ಸಮರವೇ ಜೀವನ” ಎನ್ನುತ್ತಿತ್ತು ಸಿಟ್ಟು,
“ಸಮರಸವೇ ಜೀವನ” ಎಂಬುದ ಬಚ್ಚಿಟ್ಟು.

ಸಿಟ್ಟಿನಲ್ಲಿ ನನ್ನ, ಮುಸುಕಿತ್ತು ಅಜ್ಞಾನ!
ಜಾಣತನದಿ ಬಂತು ಆ – ಜ್ಞಾನ
ಆ ಜ್ಞಾನಕೆ ನನ್ನ ನಮನ.

-ವಂದನಾ ಹೆಗ್ಡೆ

2 Comments on “ಆಹಾ!!! ಬಂತು ಸಿಟ್ಟು …

  1. ಸೂಪರ್. ಹೌದು… ಸಿಟ್ಟು ಬಂದಾಗ ನನಗೂ ಹೀಗೆಲ್ಲ ಆಗುತ್ತದೆ . ಸಿಟ್ಟಿನ ಭಾವದಲ್ಲಿ ತುಂಬಿಕೊಳ್ಳುವ ಭಾವನೆಗಳನ್ನು ಯಥಾವತ್ತಾಗಿ ಬಣ್ಣಿಸಿದ್ದೀರಿ.

  2. ಅಪರೂಪದ ವಿಷಯದ ಮೇಲಿನ ಅಂದದ ಕವನ. ಸಿಟ್ಟು ತನ್ನ ಸಾಮ್ರಾಜ್ಯದಲ್ಲಿ ಏನೆಲ್ಲಾ ಅನಾಹುತಗಳನ್ನು ಮಾಡಬಹುದೆಂಬುದನ್ನು ತಿಳಿಸಿದ ಪರಿ ಚೆನ್ನಾಗಿದೆ. ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಒಳ ಮನಸ್ಸಿನ ಶಕ್ತಿ ಎಲ್ಲರಿಗೂ ಇಂದು ಅಗತ್ಯವಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *