ಮಸಣ
ಇಲ್ಲಿಗೆ ಬರಲು ಬಯಸುವುದಿಲ್ಲ ಮನುಜ
ಬಯಸಿದರೂ ಇಲ್ಲಿರಲು ಸಾಧ್ಯವಿಲ್ಲ
ನಗುವೆನೆಂದರೂ ಇಲ್ಲಿ ನಗಲಾಗುವುದಿಲ್ಲ
ಅಳಲಾರೆನೆಂದರೂ ತಡೆಯುವ ಶಕ್ತಿಯಿಲ್ಲ
ಕನಸಿನಲ್ಲೂ ನನ್ನ ಕಾಣಬಯಸುವುದಿಲ್ಲ
ನಾನು ಕನಸಾಗಿಯೇ ಇರಬೇಕೆನ್ನುವ
ಎಂದೂ ನನಸಾಗದ ತಿರುಕನ ಕನಸು
ಕಾಣುತ್ತಲೇ ಕಾಲಿಡುವ ಮರುಳ
ಬರುವ ವಾಹನಗಳು ಬೇರೆ ಬೇರೆ ಇರಬಹುದು
ಆಚರಣೆಗಳು ನೂರಿರಬಹುದು
ಎಲ್ಲರನು ಸಮನಾಗಿ ಪಂಚಭೂತಗಳಲ್ಲಿ
ಸೇರಿಸುವ ಕಾಯಕ ಮಾತ್ರ ನನ್ನದು
ಬಡವ-ಬಲ್ಲಿದನೆಂಬ ವ್ಯತ್ಯಾಸವಿಲ್ಲ
ಪಾಪಿ-ಪುಣ್ಯವಂತನೆಂದು ನೋಡಲಾರೆ
ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲ
ಹಿರಿ-ಕಿರಿಯರೆಂಬ ಭೇದ ಮಾಡೆನು
ಕೋಟಿ ಕೊಪ್ಪರಿಗೆಯ ಸರದಾರನಿರಲಿ
ಇಲ್ಲಿಗೆ ಬರುವಾಗ ಖಾಲಿಜೋಳಿಗೆಯ ಫಕೀರನೇ
ನಿನ್ನವರೆಲ್ಲಾ ನಿನ್ನವರಲ್ಲ ಎಂಬ ನಗ್ನಸತ್ಯ
ಅರಿವಾಗುವುದೇ ಒಬ್ಬೊಂಟಿ ಮಣ್ಣಾಗುವಾಗ
ಅರಮನೆಯ ಒಡೆಯನೇ ಆದರೂ
ಹೆಣವಾದೊಡನೆ ಹೊರಹಾಕುವರು
ಆದರಿಸಿ ನನ್ನಂಗಳದಲಿ ಬರಮಾಡಿಕೊಳುವೆ
ನನ್ನೊಳಗಣ ಆರೂ ಮೂರರ ಅರಸನಿಗೆ
ಬದುಕಿದ್ದಾಗ ನೂರು ವಿಳಾಸಗಳಿರಬಹುದು
ಕೊನೆಗೆಲ್ಲರ ಖಾಯಂ ವಿಳಾಸ ಮಾತ್ರ ಕೇವಲ ನಾನು!
-ನಳಿನಿ. ಟಿ. ಭೀಮಪ್ಪ , ಧಾರವಾಡ
ಚೆನ್ನಾಗಿದೆ
dhanyavaadagalu
ಜೀವನದ ಕಟುಸತ್ಯ.ಚೆನ್ನಾಗಿ ಬರೆದಿರುವಿರಿ.
dhanyavadagalu
dhanyavaadagalu
dhanyavaadagalu
ತುಂಬಾ ಚಂದದ ಕವನ, ಬದುಕಿನ ಸತ್ಯದ ಅನಾವರಣ,
dhanyavaadagalu
ಬಹಳ ಸುಂದರ ಕವಿತೆ ಮೆಡಮ್
dhanyavaadagalu
super
dhanyavaadagalu
ಚೆನ್ನಾಗಿದೆ ಮೇಡಂ
ಕವನದ ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡು ಹೊಗುತ್ತದೆ.ಧನ್ಯವಾದಗಳು
ಎಷ್ಟು ಮೆರೆದಾಡಿದರೂ, ಎಲ್ಲವೂ ನಶ್ವರ.. ಕೊನೆಯ ತಾಣವನ್ನು ನೆನಪಿಸುವ ಭಾವನಾತ್ಮಕ ಕವನ ಚಿಂತನೆಗೆ ಹಚ್ಚುವಂತಿದೆ…ಧನ್ಯವಾದಗಳು.
dhanyavaadagalu
ತುಂಬಾ ಚೆನ್ನಾಗಿದೆ ಮೇಡಂ