ಒಂಟಿತನವೇಕೆ?
ಜಲಚರಗಳೆಲ್ಲಾ ಒಂದಾಗಿ
ಪಶು ಪಕ್ಷಿಗಳೆಲ್ಲಾ ಒಟ್ಟಾಗಿ
ಚಗಳಿ ಇರುವೆಗಳು ಒಗ್ಗಟ್ಟಾಗಿ
ಈ ಜೀವಿಗಳಾಗಿಹವು ಜಂಟಿ
ಕಲ್ಮಣ್ಣು ಮಿಶ್ರಣವಾಗಿ
ಎಣ್ಣೆಬತ್ತಿ ಸಂಧಿಸಿ ಬೆಳಗಿ
ಭೂನೀರು ಸಾಗರದಲೊಂದಾಗಿ
ಈ ನಿರ್ಜಿವಿಗಳಾಗಿಹವು ಜಂಟಿ
ಜಲಚರ ಪಶುಪಕ್ಷಿ
ಗೂಡಿನ ಇರುವೆಗಿಂತ ಮೇಲ್ಬುದ್ದಿ ಮನುಜನದು
ಕಲ್ಮಣ್ಣು ಎಣ್ಣೆಬತ್ತಿ
ಪನ್ನೀರ ಹಿತವಾಗಿ
ಬಳಸೋ ಸದ್ಬುದ್ದಿ ಮನುಜನದು
ಮನುಜ ಜನ್ಮ ಬಲು
ದೊಡ್ಡದೆ ನಿಜ
ಅದೇಕೆ ಆತನಲಿ
ಒಂಟಿತನದ ಸಜಾ?
ಮದ ಮತ್ಸರದಲಿ ಸಿರಿವಂತ
ಲೋಭ ಮೋಹಗಳಿವನಿಗೆ ಸ್ವಂತ
ಅಯ್ಯೋ! ಮನುಜನೆ..
ಇವುಗಳನು ಮೆಟ್ಟಿ ನಿಲ್ಲದೆ
ನೀನಾದೆ ಯಾಕೆ ಒಂಟಿ?,.
–ಶಿವಾನಂದ್ ಕರೂರ್ ಮಠ್, ದಾವಣಗೆರೆ.
ಬಹಳ ಚೆನ್ನಾಗಿದೆ ಸರ್
ಎಣ್ಣೆ ಬತ್ತಿ ಸಂಧಿಸಿ ಬೆಳಗಿ..! ಚೆಂದದ ಕವನ
ಧನ್ಯವಾದಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ
ಸೀಮೇಗಿಲ್ಲದ ಅಹಂಕಾರ ಆವರಿಸಿದಾಗಲೇ ಮನುಷ್ಯ ಒಂಟಿಯಾಗೋದು. ಚೆನ್ನಾಗಿದೆ ಕವಿತೆ
ಹೌದು , ಧನ್ಯವಾದಗಳು
ಮನುಜನು ತನ್ನ ಕೆಟ್ಟ ಗುಣಗಳನ್ನು ಮೆಟ್ಟಿ ನಿಂತರೆ ಆಗ ಆಗಲಾರನು ಒಂಟಿ. ಮನಮುಟ್ಟುವಂತಿದೆ ಕವನ, ಧನ್ಯವಾದಗಳು.