ಬಾಳೆ ದಂಡಿನ ವೈವಿಧ್ಯ
ನಮಸ್ಕಾರ, ಇದು ವಸಂತ ಮಾಸ. ಬೇಸಿಗೆಯ ದಿನಗಳಲ್ಲಿ ಸಾಕಷ್ಟು ನೀರು ಹಾಗೂ ನಾರಿನಂಶ ಇರುವ ಆಹಾರ ಸೇವನೆ ದೇಹಕ್ಕೆ ಅತೀ ಅಗತ್ಯ. ನಮ್ಮಲ್ಲಿ ಸುಲಭವಾಗಿ ಲಭಿಸುವ ತರಕಾರಿಗಳಲ್ಲೊಂದು ಬಾಳೆ ದಂಡು. ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿಗೆ ಹೊರತಲ್ಲ ಇದು. ಬಹಳ ಔಷಧೀಯ ಗುಣ ಹೊಂದಿರುವ ಇದು ಹಸಿ, ಬಿಸಿ ಅಡುಗೆ ಗಳಿಗೆ ಹೇಳಿ ಮಾಡಿಸಿದಂತಿದೆ. ಅಂತಹ ಕೆಲವು ಅಡುಗೆ ಗಳಿಗೆ ಪರಿಚಯ ಇಲ್ಲಿ.
ದೋಸೆ:
ನಾರು ತೆಗೆದು ಕತ್ತರಿಸಿದ ಬಾಳೆ ದಂಡನ್ನು ನೆನೆಸಿದ ಅಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿ ತಕ್ಷಣ ನೀರು ದೋಸೆಯಂತೆ ಮಾಡಿ ಸವಿಯಿರಿ. ಹಿಟ್ಟನ್ನು ಹುಳಿ ಬರಿಸ ಬೇಡಿ.
ಬಜ್ಜಿ:
ನಾರು ತೆಗೆದು ತೆಳ್ಳಗೆ ಕತ್ತರಿಸಿದ ಬಾಳೆ ದಂಡು ಬಿಲ್ಲೆ ಗಳಿಗೆ ಸ್ವಲ್ಪ ಉಪ್ಪು ಮೆಣಸಿನ ಪುಡಿ ಬೆರೆಸಿಡಿ. ಕಡ್ಲೆ ಅಥವಾ ಅಕ್ಕಿ ಹಿಟ್ಟಿಗೆ, ಉಪ್ಪು, ಖಾರ, ಇಂಗು, ಓಮ ಹಾಕಿ ಬೇಕಾದಷ್ಟು ನೀರು ಹಾಕಿ ಬಜ್ಜಿ ಹಿಟ್ಟು ಕಲಸಿ. ಕತ್ತರಿಸಿದ ದಂಡನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಬಾಳೆ ದಂಡು ಬಾರ್ಲಿ ಜ್ಯೂಸ್:
ಬಾಳೆ ದಿಂಡು ಕತ್ತರಿಸಿ, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಸೋಸಿ ಒಂದು ಲೋಟದಷ್ಟು ನೀರು ತೆಗೆಯಿರಿ. ಇದಕ್ಕೆ ಕುದಿಸಿ ಆರಿಸಿದ ಬಾರ್ಲಿ ನೀರು, ರುಚಿಗೆ ಉಪ್ಪು ಯಾ. ಸಕ್ಕರೆ , ನಿಂಬೆ ರಸ ಹಾಕಿ ಕುಡಿಯಿರಿ. ದಂಡು ಜ್ಯೂಸ್ ಕಿಡ್ನಿ ಕಲ್ಲು ಹಾಗೂ ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮ.
ಸಾಸಿವೆ
ಹೆಚ್ಚಿದ ಬಾಳೆ ದಂಡನ್ನು, ತೆಂಗಿನ ಕಾಯಿ, ಸ್ವಲ್ಪ ಸಾಸಿವೆ, ಕೆಂಪು ಮೆಣಸು, ಬೆಲ್ಲ, ಉಪ್ಪು ಹಾಕಿ ರುಬ್ಬಿ. ಮಜ್ಜಿಗೆ ಹಾಕಿದರೆ ತಣ್ಣಗಿನ ಸಾಸಿವೆ ಊಟಕ್ಕೆ ಸಿದ್ಧ.
ಇದೇ ರೀತಿ ಚಟ್ನಿ, ಪಲ್ಯ ಮಾಡಬಹುದು.
-ನಿಶಾ, ಮಿತ್ತೂರು, ಬೆಂಗಳೂರು
ಧನ್ಯವಾದಗಳು
Arogyakara aduge ,
Thank you
ಉತ್ತಮ ಅಡುಗೆಗಳು
Thank you
Aatu Nisha Olle Maahiti
Thank you
ಕಿಡ್ನಿ ಸ್ಟೋನ್ ಇರುವವರಿಗೂ ಬಾಳೆದಿಂಡಿನ ರಸ ಔಷಧ ಎಂದು ಹೇಳುವುದು ಕೇಳಿದ್ದೇನೆ
Thank you, yes. I mentioned it under juice
ಒಳ್ಳೆಯ ಮಾಹಿತಿ ನೀಡಿದ್ದೀರಿ. ಹೆಸರು ಬೇಳೆಯನ್ನು ಸೇರಿಸಿ ಪಲ್ಯ ಅಥವಾ ಸಾಂಬಾರು ಆಗಾಗ ಮಾಡುತ್ತೇವೆ.
ಅತ್ಯಂತ ಆರೋಗ್ಯ ಕರ ಬಾಳೆದಿಂಡಿನ ಅಡುಗೆ ಬಹಳ ಚೆನ್ನಾಗಿತ್ತು
ಬಾಳೆದಂಡಿನಿಂದ ಪಲ್ಯ, ದೋಸೆ ತಯಾರಿಸುತ್ತಿದ್ದೆ.ಈಗ ಇನ್ನಷ್ಟು ರೆಸಿಪಿಗಳನ್ನು ತಿಳಿದಂತಾಯಿತು. ಧನ್ಯವಾದಗಳು ನಿಶಾ.
ಬಾಳೆದಿಂಡಿನ ಉಪಯೋಗ ಅತ್ಯಂತ ಆರೋಗ್ಯಕರ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.