ಏನಲ್ಲ ಯಾವ ಹಬ್ಬವೂ
.
ಹರೆಯ ತಂದ ತುಂಬು ಮಲ್ಲಿಗೆ
ನಿನ್ನ ಯೌವನ ಎಂದೂ ಹೊಸತನ
ಯುಗಾದಿಯಾಗಿ ಬಂದು ತರುವುದು
ಎಲ್ಲಾ ಸಂವತ್ಸರವೂ ಭವ್ಯ ಚಾರಣ
ಪ್ರತಿ ಆಚರಣೆ ನಿನ್ನ ಕಣ್ಣಂಚಲ್ಲಿ
ತಳಿರು ತೋರಣ ಕಟ್ಟಿದ ಸಮಯ
ಏನಲ್ಲ ಯಾವ ಹಬ್ಬವೂ
ಏನಿಲ್ಲ ಹೇಳದಿರೆ ನಿನ್ನ ಬಗ್ಗೆಯ
ಏನಿದು ದಿನಗಣನೆಯ ಹೊಸ ಪರಿ
ನಿನ್ನ ಬಳುಕಲ್ಲಿ ಗ್ರಹಗಳ ಸುತ್ತಾಟ
ಹತ್ತಿರವಿರೆ ವರ್ಷಗಳಿಗೆ ಕ್ಷಣದ ಅನುಭವ
ದೂರವಿರೆ ಕ್ಷಣವೂ ಸಹ ಯುಗಗಳ ಆಟ
ಕೇಳಲೆಂದು ಕುಳಿತರೆ ಓದುವ ಪಂಚಾಂಗ
ಕಥೆಗಳು ಮಾಡಿಹವು ನಿನ್ನ ಗುಣಗಾನ
ಆಗಿ ಗ್ರಹಗತಿಯಲ್ಲಿ ನೇರ ಸಂಚಾರ
ರಾಶಿಫಲವಾಗಿವೆ ಸೌರಮಾನ ಚಂದ್ರಮಾನ
ಬರಡು ಮರದಲ್ಲಿ ಹಸಿರು ತಳುಕು
ನಿನ್ನಯ ಕಾಲ್ಗುಣದ ಮೊದಲ ಲಕ್ಷಣ
ಏನಿದು ಹೆಣ್ಣೆ ನಿನ್ನಯ ಹುರುಪು
ಎಲ್ಲೆಲ್ಲೂ ಜೀವ ಕಳೆ ತುಂಬಿ ಚೇತನ
ನಿನ್ನ ಹುಸಿಮುನಿಸಲ್ಲಿ ಬೇವು
ನಕ್ಕ ನಗೆಯಂಚಲ್ಲಿ ಬೆಲ್ಲದ ಆದರ
ಚಿಗುರುತ್ತಿರೆ ಖುಷಿ ಯುಗಾದಿ ಬಾಳೆಲ್ಲ
ನಿನ್ನೊಲವು ನಿತ್ಯ ಹಬ್ಬದ ಸಡಗರ
-ಬಸವರಾಜ ಕಾಸೆ, ಬೆಂಗಳೂರು
ಚೆಂದದ ಕವನ
ಯುಗಾದಿಯ ಬೇವು ಬೆಲ್ಲದ ಹೂರಣ,
ಸಾರುವುದು ಪಾಠ- ಕಷ್ಟ ಸುಖಗಳಿಂದ ಆವೃತ ಈ ಜೀವನ. ಚಂದದ ಕವನ
ಬೇವು ಬೆಲ್ಲ…ಕಷ್ಟ ಸುಖ..ಜೀವನದ ನವ
ಯುಗಾದಿಯ ಸ್ವಾಗತಕ್ಕೊಂದು ಸುಂದರ ಕವನ.