ಹೂವು
ಮುಗ್ಧತೆಯ ನಗು ಚೆಲ್ಲಿ
ಹಸಿರು ಎಲೆಗಳಲರಳಿ
ಕುಸುಮ ಕೋಮಲೆ
ನಿನ್ನದದಮ್ಯ ಚೆಲುವು !
ವಸುಂಧರೆಗೂ ಬೆರಗು
ಕಂಪೀಯುವಾ ಸೊಬಗು
ತಂಗಾಳಿ ಜೋಕಾಲಿ ತೂಗಿ
ನೀ ನಕ್ಕಾಗ ಗೆಲುವು !!
ಅರುಣ ಕಿರಣವ ಬೀರಿ
ಹೂದಳಗಳನು ಸವರಿ
ಇಬ್ಬನಿಯು ಕರಗುತಿರೆ
ನಸು ನಾಚಿದೇ ನಲಿವು !
ಮರಬಳ್ಳಿ ಲತೆ ಚಿಗುರಿ
ಮೈದುಂಬಿ ಶಾರ್ವರಿ
ಮೌನ ರಾಗದಿ ಹಾಡಿ
ತೋರಿದಳು ಒಲವು !!
ಬಣ್ಣ ಬಣ್ಣದ ಚಿತ್ತಾರ
ಮನ ಬನವು ಹಗುರ
ನವನವೀನತೆ ಕನಸು
ಭಾವಗಳು ಹಲವು !
ನಿಸರ್ಗ ಮೋಹಕ ಹೂವು
ಸೃಷ್ಟಿಯೈಸಿರಿ ಘಮವು
ಉಸಿರಿದ್ದಷ್ಟು ದಿನವಿಲ್ಲಿ
ಪರಿಮಳಿಸುತಿದೆ ಕೆಲವು !!
-ಪ್ರಮೀಳಾ ಚುಳ್ಳಿಕ್ಕಾನ.
ಹೂವಿನ ಸೊಬಗಿನ ವಿವರಣೆ ಯೊಂದಿಗೆ ಒಂದು ಸುಂದರ ವಾತಾವರಣದ ಸೃಷ್ಟಿಯಾಗುತ್ತದೆ ಈ ಸಾಲುಗಳನ್ನು ಓದುವಾಗ ಮನದಲ್ಲಿ
ಚಂದದ ಸುಮವು ನವಿರಾಗಿ ಅರಳಿ ಸುಗಂಧ ಸೂಸಿದೆ ಈ ಸುಂದರ ಕವನದಲ್ಲಿ…