ಮಹಾ ಶಿವರಾತ್ರಿಯ ಮಹಾಫಲಗಳು
ಶಿವರಾತ್ರಿ ಹಿಂದುಗಳ ಪ್ರಮುಖ ಹಬ್ಬ. ಮಾಘಮಾಸದಿ ಬಹುಳ ಚತುರ್ದಶಿಯಂದು, ದಿನವಿಡೀ ಉಪವಾಸವಿದ್ದು, ಮರುದಿನ ಸಿಹಿ ಅಡುಗೆಯನ್ನು ಮಾಡುವುದು ವಾಡಿಕೆ. ದೇಶಾದ್ಯಂತ ದಿನವಿಡೀ ಉಪವಾಸ ಮಾಡಿ, ಶಿವನಿಗೆ ಭಕ್ತಿಯಿಂದ ಅಭಿಷೇಕವನ್ನು ಮಾಡುತ್ತಾರೆ.
ಶಿವರಾತ್ರಿಯನ್ನು ಆಚರಿಸಲು ಕಾರಣವಿದೆ. ಭೃಹ್ಮ ಮತ್ತು ವಿಷ್ಣುವಿನ ಮಧ್ಯೆ ಬಂದ ಸಮಸ್ಯೆ ಬಗೆಹರಿಸಲು ಶಿವನು ಅಂತ್ಯವಿಲ್ಲದ ಅಗ್ನಿ ಕಂಬವಾದನೆಂದು ಶಿವ ಪುರಾಣ ಹೇಳುತ್ತದೆ. ಇನ್ನೊಂದೆಡೆ, ಪಾರ್ವತಿಯೂ ರಾತ್ರಿಯಿಡಿ ಶಿವನ ಧ್ಯಾನ ಮಾಡಿ ಶಿವನನ್ನು ವರಿಸಿದಳೆಂಬ ಪ್ರತಿತಿಯೂ ಇದೆ. ಜೊತೆಗೆ ಒಬ್ಬ ಬೇಡನು ಬೇಟೆಗಾಗಿ ಕಾಡಿಗೆ ಬಂದಾಗ ಎಲ್ಲೂ ಬೇಟೆ ಸಿಗಲಿಲ್ಲ. ಬೇಟೆ ಅರಸುತ್ತ ಹೋದಾಗ ದಾರಿ ತಪ್ಪಿ ದಟ್ಡ ಕಾಡನ್ನು ಸೇರಿದಾಗ, ಅಲ್ಲಿರುವ ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರೆದವು, ಆಗ ಬೇಡ, ಹೆದರಿ ಒಂದು ಮರವನ್ನು ಹತ್ತಿ ತುತ್ತ ತುದಿಯಲ್ಲಿ ಕುಳಿತು ಶಿವನನ್ನು ಜಪಿಸುತ್ತಾ, ಹೆದರಿಕೆಯಿಂದ ಮರದಲ್ಲಿರುವ ಎಲೆಗಳನ್ನೆಲ್ಲ ಕಿತ್ತಿ ಹಾಕುತ್ತಿದ್ದನಂತೆ. ಅವನು ಕುಳಿತ ಮರ ಬಿಲ್ವ ಪತ್ರಿಯ ಮರವಾದ್ದರಿಂದ, ಎಲೆಗಳೆಲ್ಲಾ ಮರದ ಕೆಳಗಿರುವ ಶಿವಲಿಂಗದ ಮೇಲೆ ಬೀಳುತ್ತಿರುವುದರಿಂದ, ರಾತ್ರಿಯಿಡೀ ಜಾಗರಣೆ ಮಾಡಿ ಬಿಲ್ವ ಪತ್ರಿಯನ್ನು ಅರ್ಪಿಸಿದ್ದು, ಶಿವನು ಅವನ ಭಕ್ತಿಗೆ ಮೆಚ್ಚಿ ಬೇಡನನ್ನು ರಕ್ಷಿಸಿದನೆಂದು, ಅಂದಿನಿಂದ ಆ ದಿನವನ್ನು ಶಿವರಾತ್ರಿ ದಿನವನ್ನಾಗಿ ಆಚರಿಸುತ್ತಾ ಬಂದಿದ್ದಾರೆಂದು, ಶಿವ ಪುರಾಣ ಹೇಳುತ್ತದೆ..
.
ವೈಜ್ಞಾನಿಕವಾಗಿ ನಾವು ಆಲೋಚನೆ ಮಾಡಿದಾಗ. ಈ ಶಿವರಾತ್ರಿ ಹಬ್ಬವನ್ನು ನಮ್ಮ ಹಿರಿಯಲು ಏಕೆ ಮಾಡಿರಬಹುದೆಂದು ತಿಳಿಯುತ್ತದೆ. ಸೂರ್ಯ ಮತ್ತು ಚಂದ್ರನ ಚಲನೆಯಿಂದಾಗಿ ಕಾಲಮಾನಕ್ಕೆ ನಮ್ಮ ದೇಹ ಒಗ್ಗಿಕೊಳ್ಳಬೇಕಾಗುತ್ತದೆ. ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರದಲ್ಲಿ ಬಳಲಿದ ದೇಹ ಇನ್ನು ಬೇಸಿಗೆಗೆ ಗಟ್ಟಿಯಾಗಬೇಕು. ಒಂದು ದಿನ ಉಪವಾಸ ಮಾಡಿ ದೇಹದ ಜೀವಾಣುಗಳಿಗೆ ವಿಶ್ರಾಂತಿ ಕೊಟ್ಟು, ಮನಸಾರೆ ದೇವರ ನಾಮ ಹೇಳುತ್ತಾ ಧ್ಯಾನ ಮಾಡಿದರೆ ಯೋಗದ ಒಂದು ಬಹು ಮುಖ್ಯವಾದ ಭಾಗ, ಅದರಿಂದ ಒಂದು ಯೋಗ್ಯವಾದ ಪ್ರತಿಫಲವನ್ನೇ ಪಡೆಯುತ್ತೇವೆ. ಜೊತೆಗೆ ದೈಹಿಕವಾಗಿ ನೀರನ್ನು ತಂದು ಲಿಂಗಕ್ಕೆ ಹಾಕುತ್ತ, ಬಿಲ್ವ ಪತ್ರಿಯಿಂದ ಅಲಂಕರಿಸುವುದರಿಂದ, ಬಿಲ್ವ ಪತ್ರಿಯ ವಾಸನೆಯಿಂದಾಗಿ ನಮಗೆ ಉಸಿರಾಟದ ತೊಂದರೆ ಹೋಗಬಹುದಲ್ಲದೆ, ಜಾಗರಣೆಯಿಂದ ಬುದ್ಧಿ ಶಕ್ತಿಯೂ ಲಭಿಸುತ್ತದೆ..
.
‘
ಪ್ರಸ್ತುತದ ಒಳ್ಳೆಯ ಲೇಖನ. ಚೆನ್ನಾಗಿ ಮೂಡಿ ಬಂದಿದೆ.ಮಧುಮತಿಯವರೆ.
ಧಾರ್ಮಿಕ, ಹಾಗೂ ವೈಜ್ಞಾನಿಕ ಕಾರಣಗಳನ್ನೊಳಗೊಂಡ ಶಿವಾರಾತ್ರಿಯ ವೈಶಿಷ್ಟ್ಯದ ಕುರಿತಾದ ಬರಹ ಚೆನ್ನಾಗಿದೆ.
ಸಕಾಲಿಕ ವೈಶಿಷ್ಟ್ಯಪೂರ್ಣ ಲೇಖನ ಚೆನ್ನಾಗಿದೆ.