ಅಮ್ಮ
ಕಣ್ಣಿಗೆ ಕಾಣುವ ದೇವರು ಅಮ್ಮ
ಕಷ್ಟವ ಸಹಿಸಿ ತಾಳ್ಮೆಯಿಂದಿರುವಳು ಸುಮ್ಮ
ನವಮಾಸವ ಹೊತ್ತು ಗರ್ಭದಿ
ಹೆರುವಾಗ ಗಳಗಳ ಅತ್ತು ಮನದಿ
ಲಾಲನೆ ಪಾಲನೆಯಲ್ಲಿ ನಿನಗೆ ಸರಿಸಾಟಿಯಿಲ್ಲ
ಇಳೆಯೊಳಗೆ ನಿನಗೆ ಸರಿಸಮ ಯಾರಿಲ್ಲ…..
ನೀನುಪವಾಸವಿದ್ದು ನಮ್ಮನ್ನು ಸದೃಢರನ್ನಾಗಿಸಿದೆ
ನೀನು ಕೃಶಕಾಶಳಾಗಿ ಎಲುಬಿನ ಹಂದರವಾದೆ
ಗಂಡನ ಪ್ರೀತಿ ಸಿಗದಿದ್ದರೂ,ಕೊಟ್ಟೆ ನಮಗೆ ಪ್ರೀತಿ
ಕೋಟಿ ಕೊಟ್ಟರು ಸಿಗುವದಿಲ್ಲ ನಿನ್ನ ವಾತ್ಸಲ್ಯದ ರೀತಿ….
ಪುಡಿಗಾಸನ್ನು ನನ್ನ ಖರ್ಚಿಗೆ ನೀಡಿ
ಹರಕು ಬಟ್ಟೆಯಲ್ಲಿ ಸಮಾಧಾನದಿಂದಿರುವೆ
ನನ್ನ ಎಳಿಗೆಯೆ ನಿನ್ನ ಗುರಿಯನ್ನಾಗಿಸಿದೆ
ನಿನ್ನ ಆಸೆಆಕಾಂಕ್ಷೆಗಳನ್ನು ನಿನ್ನೊಳಗೆ ಹುದುಗಿಸಿರುವೆ….
ನಿನ್ನ ರೋಗರುಜಿನಗಳನ್ನು ಬದಿಗೊತ್ತಿ
ಜ್ವರಪೀಡಿತನಾದ ನನ್ನ ಸಲುವಾಗಿ ನಿದ್ದೆಬಿಟ್ಟೆ
ಅಮ್ಮ….ನಿನ್ನ ತ್ಯಾಗವೇ ಬೆಟ್ಟದಷ್ಟು
ಬಡತನದ ಬೇಗೆಯಲಿ ಬೆಳೆಸಿದೆ ಕಷ್ಟಪಟ್ಟು…..
ಹೇಗಿದ್ದರೂ ನನ್ನ ಮುದ್ದಿಸಿ ಬೆಳೆಸಿದೆ
ರನ್ನ,ಚಿನ್ನ,ಮುತ್ತು,ಮಾಣಿಕ್ಯ,ವಜ್ರ ವೈಢೂರ್ಯವೆಂದೆ
ಬಡತನದಲ್ಲಿ ಎರಡಕ್ಷರ ಕಲಿಸಿ ವಿದ್ಯಾವಂತನನ್ನಾಗಿ ಮಾಡಿದೆ
ಸನ್ಮಾರ್ಗದ ಪಥವ ತೋರಿಸಿ,ಸದ್ಗುಣ ಬೆಳೆಸಿದೆ…
–ಶಂಕರಾನಂದ ಹೆಬ್ಬಾಳ, ಇಲಕಲ್ಲ
ಹೌದು, ಅಮ್ಮ ಎಂಬ ದೇವತೆಯ ತ್ಯಾಗ ವನ್ನು ಎಷ್ಟು ಬಣ್ಣಿಸಿದರೂ ಸಾಲದು.
ಚಂದದ ಕವನ. ಅಮ್ಮನ ಪ್ರೀತಿ, ತ್ಯಾಗ ಅಗಣಿತ.