ಮೊಬೈಲ್ ಎಂಬ ಮಾಂತ್ರಿಕ

Share Button


“ಮೊಬೈಲ್ ಎಂಬ ಪದ ಇಂದಿನ ದಿನಗಳಲ್ಲಿ ತಿಳಿಯದವರ ಸಂಖ್ಯೆ ಬಹಳ ವಿರಳ. ಮೊಬೈಲ್ ಎಂಬುದು ವಿಜ್ಞಾನ ಕ್ಷೇತ್ರದ ಒಂದು ಕ್ರಾಂತಿಯಾಗಿ ಬೆಳೆದು ನಿಂತಿದೆ.

ಅಲೆಮಾರಿಗಳಾಗಿದ್ದ ಮನುಷ್ಯ ಪಂಗಡಗಳಿಗೆ ಧ್ವನಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಸ್ತರಿಸುವುದು ಅನಿವಾರ್ಯವಾಗಿತ್ತು. ಅಲೆಕ್ಸಾಂಡರ್ ಗ್ರಹಾಂ ಬೆಲ್  ಅವರು ದೂರವಾಣಿಯ ಸಂಶೋಧನೆ ಮಾಡಿದ್ದು ಅಂತಹ ದಿನಗಳ ಬೇಡಿಕೆಯನ್ನು ಪೂರೈಸಿತು. ಆಗ ಇದ್ದದ್ದು ವಯರ್ ಗಳ  ಮೂಲಕ ಸಂಪರ್ಕ ಸಾಧಿಸುವ ದೂರವಾಣಿ. ಇಲ್ಲಿಂದ ಇಂಗ್ಲೆಂಡಿಗೆ ಫೋನ್ ಮಾಡಿದರೂ ನಮ್ಮ ಧ್ವನಿ ತಂತಿಯ ಮೂಲಕವೇ ಸಾಗಬೇಕಿತ್ತು. ಅದು ಒಂದು ಮಹತ್ತರವಾದ ಕ್ರಾಂತಿಯಾಗಿತ್ತು . ಜುಲೈ 30, 1995ರಂದು ಭಾರತದ ಆಗಿನ ಸಂಪರ್ಕ ಸಚಿವ ಸುಖರಾಮ್ ಆಗಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರಿಗೆ ಫೋನಾಯಿಸುವ ಮೂಲಕ ಭಾರತದಲ್ಲಿ ಮೊಬೈಲ್ ಕ್ರಾಂತಿಗೆ ನಾಂದಿ ಹಾಡಿದ್ಧರಂತೆ. ಈ ದೂರವಾಣಿ ಅಭಿವೃದ್ಧಿಯಾಗಿ ‘ಚರವಾಣಿ’ ಅಂದರೆ ಮೊಬೈಲ್ ಆಗಿ ಪರಿವರ್ತನೆಗೊಂಡು ಮತ್ತು ಅಭಿವೃದ್ಧಿ ಪಡೆದು ಇದೀಗ ಸ್ಮಾರ್ಟ್ ಫೋನ್ ಆಗಿ ಬದಲಾಗಿದೆ.

ಸ್ಮಾರ್ಟ್ ಫೋನ್  ಇಂದಿನ  ಜನತೆಯ ಅವಿಭಾಜ್ಯ ಅಂಗವಾಗಿದೆ. ಇವತ್ತು ಈ ಸ್ಮಾರ್ಟ್ ಫೋನಿನಲ್ಲಿ ಸಿಗದ ವಿಚಾರಗಳೇ ಇಲ್ಲ. ನಮಗೆ ಬೇಕಾದ ವಿಷಯಗಳ ಅಥವಾ ಸ್ಥಳಗಳ ಹಾಗೂ ಇತರ ಮಾಹಿತಿಯನ್ನು ಇಂಟರ್ನೆಟ್ ಸೌಲಭ್ಯದ ಮೂಲಕ ಇವುಗಳು ತಿಳಿಸುತ್ತವೆ. ಇಂದು ಭಾರತದ 60%ಕ್ಕಿಂತಲೂ ಹೆಚ್ಚು ಜನ ಮೊಬೈಲ್ ಮಾಲೀಕರಾಗುತ್ತಿದ್ದಾರೆ. ಇದರಿಂದ ಮೊಬೈಲ್ ನ ಪ್ರಭುತ್ವ ಎಷ್ಟರ ಮಟ್ಟಿಗಿದೆ ಎಂಬುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಮೊಬೈಲ್ ಇಲ್ಲದ ಜನಗಳನ್ನು ಇಂದು ವಿಚಿತ್ರ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಬಡವರು ಅನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.

ಮೊಬೈಲ್ ಹಾಗೂ ಇಂಟರ್ನೆಟ್ ಸೌಲಭ್ಯದಿಂದ ಎಷ್ಟು ಒಳ್ಳೆಯದಿದೆಯೊ ಅದರ ದುಪ್ಪಟ್ಟು ಕೆಟ್ಟದ್ದು ಇದೆ. “ಮೊಬೈಲ್ ಹ್ಯಾಕ್ ಆಗುವುದು” ಎಂಬ ಶಬ್ದವನ್ನು ನಾವು ಕೇಳುತ್ತಿರುತ್ತೇವೆ . ಇದಕ್ಕೆ ಕಾರಣ ಇಂಟರ್ನೆಟ್ ನಲ್ಲಿರುವ ಅಪರಿಚಿತ ವೆಬ್ ಸೈಟ್ ಗಳು. ಈಗಿನ ಕಾಲದಲ್ಲಿ ಈಗ ತಾನೇ ಹುಟ್ಟಿದಂತಹ ಮಗು ಕೂಡ ಮೊಬೈಲ್ ನ ದಾಸನಾಗಿರುತ್ತದೆ. ಪುಟ್ಟ ಮಕ್ಕಳು ಊಟ ಮಾಡಿಸಬೇಕಾದರೆ ಮಲಗಬೇಕಾದರೆ ಎಲ್ಲದಕ್ಕೂ ಮೊಬೈಲ್ ತೋರಿಸಬೇಕೆಂದು ಹಠ ಮಾಡುತ್ತಾರೆ. ಕೆಲವು ಮಕ್ಕಳು ಅಪರಿಚಿತ ವೆಬ್ ಸೈಟ್ ಗಳನ್ನು ಅಥವಾ ಮಾರಕ ಗೇಮ್ಸ್ ಗಳಿಗೆ ಮಾರು ಹೋಗಿ ತಮ್ಮ ಪ್ರಾಣವನ್ನೇ  ಕಳೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ ಬ್ಲೂ ವೇಲ್, momo ಇತ್ಯಾದಿ ಇಂಟರ್ನೆಟ್ ಗೇಮ್ಸ್ ಗಳಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ. ಇನ್ನು ಈಗಿನ ಯುವಕ ಯುವತಿಯರ ಬಗ್ಗೆ ಹೇಳಬೇಕೆಂದರೆ ಅವರು ಕೂಡ ವಾಟ್ಸಪ್ ಫೇಸ್ಬುಕ್ ಗಳಂತಹ ಜಾಲತಾಣಗಳ ಒಳಗೆ ಕಳೆದು ಹೋಗಿದ್ದಾರೆ. ಹೊರಗಿನ ಜಗತ್ತಿನ ಅರಿವೇ ಇಲ್ಲ. ಇದರಿಂದಾಗಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ.ಒಂದೇ ಮನೆಯಲ್ಲಿದ್ದರೂ ಮನಸ್ಸುಗಳು ದೂರ ದೂರ . ರಾತ್ರಿಯ ವೇಳೆ ಮೊಬೈಲನ್ನು ಅತಿಯಾಗಿ ವೀಕ್ಷಿಸುವುದರಿಂದ ಅದರ ವಿಕಿರಣಗಳಿಂದಾಗಿ ಕಣ್ಣಿಗೆ ಬಹಳ ಹಾನಿ .

ಮಿತಿ ಮೀರಿದ ಹಾಗೂ ಅತಿಯಾದ ಮೊಬೈಲ್ ಉಪಯೋಗದಿಂದ “Nomophobia” ಎಂಬ ಹೊಸ ಕಾಯಿಲೆ ಬರುವ ಸಾಧ್ಯತೆ ಇದೆ. ಮೊಬೈಲನ್ನು ಒಂದು ಕ್ಷಣ ಕೂಡ ಬಿಟ್ಟಿರಲಾಗದೆ ಇರುವುದು ಕೂಡ ಈ ಕಾಯಿಲೆಯ ಒಂದು ಲಕ್ಷಣ. ಒಂದು ವೇಳೆ ಮೊಬೈಲ್ನ ಚಾರ್ಜ್ ಮುಗಿದರೆ ಅಥವಾ ಸಿಗ್ನಲ್ ಸಿಗದಿದ್ದಾಗ ಅವರಿಗೆ ಅವರ ಮನಸ್ಸನ್ನು ಹತೋಟಿಯಲ್ಲಿ ಇಟ್ಟು ಕೊಳ್ಳಲಾಗುವುದಿಲ್ಲ. ಈ ಕಾಯಿಲೆ ಕೇವಲ ಹಿರಿಯರನ್ನ ಲ್ಲದೆ ಮಕ್ಕಳನ್ನೂ ಬಾಧಿಸಬಹುದಾದ ಕಾಯಿಲೆಯಾಗಿದೆ.

ಮೊಬೈಲ್ ಎನ್ನುವ ಮಾಂತ್ರಿಕ ನಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳೂ ಇವೆ. ಉದಾಹರಣೆಗೆ ಶಿಕ್ಷಣಕ್ಕೆ ಸಂಬಂಧಪಟ್ಟ ವೆಬ್ಸೈಟ್ ಗಳು ವಿದ್ಯಾರ್ಥಿಗಳಿಗೆ ಬಹಳ ಉಪಕಾರಿ. ಒಟ್ಟಲ್ಲಿ ಮೊಬೈಲ್ ನ ಕುರಿತಾಗಿ ಮಕ್ಕಳಿಗೂ ಒಳಿತು ಹಾಗೂ ಕೆಡುಕು ಎರಡರ ಬಗ್ಗೆಯೂ ಸರಿಯಾದ ಮಾಹಿತಿಯ ಅರಿವಿದ್ದರೆ ಇದು ಒಂದು ಅಪಾಯಕಾರಿ ಸಾಧನ ಅನ್ನಿಸುವುದಿಲ್ಲ .

– ಸುದರ್ಶನ. ಬಿ , 
ಹತ್ತನೇ ತರಗತಿ

ಸತ್ಯನಾರಾಯಣ ಹೈಸ್ಕೂಲು ,ಪೆರ್ಲ

5 Responses

  1. ಶಿವಮೂರ್ತಿ ಹೆಚ್ says:

    ಬೆಳೆಯುವ ಸಿರಿ ಮೊಳಕೆಯಲ್ಲಿ… ಉತ್ತಮ ಬರವಣಿಗೆ..

  2. Hema says:

    ಚಿಕ್ಕ ವಯಸ್ಸಿಗೇ ಚಿಂತನಾಪೂರ್ಣವಾಗಿ ಬರೆದ ಚೆಂದದ ಬರಹ.

  3. ಹರ್ಷಿತಾ says:

    ಉತ್ತಮ ಲೇಖನ ಸುದರ್ಶನ….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: