ಹೊಸ ವರುಷಕೆ ಸ್ವಾಗತ
ಬರಲಿದೆ ಹೊಸ ವರುಷ
ತರಲಿ ಎಲ್ಲರ ಬಾಳಲಿ ಹರುಷ
ನೋವು ದ್ವೇಷಗಳ ಕಳೆದು
ಸ್ನೇಹ ಸಂಬಂಧವ ಕೂಡುತ
.
ಶುರುವಾಗಲಿ ಸುಖದ ಪರ್ವವು
ಶುರುವಾಗಲಿ ಸುಖದ ಪರ್ವವು
ಮೊಳಗಲಿ ಕೀರ್ತಿ ಅನಂತವು
ಬರಲಿ ಹೊಸ ವರುಷ ಬಾಳಲಿ
,
ಹೊಸ ಚೈತನ್ಯ ಮೂಡಲಿ
ಹೊಸ ಚೈತನ್ಯ ಮೂಡಲಿ
ಗುರಿಯ ತಟ ಸನಿಹವಾಗಲಿ
ಸಕಲವೂ ಶುಭವಾಗಲಿ
ಗತಿಸಿದ ಅವಮಾನಗಳೆಲ್ಲವೂ
ಸನ್ಮಾನವಾಗಿ ಸಜ್ಜನರ ಮುಡಿಗೇರಲಿ
ಬರಲಿ ಹೊಸ ವರುಷ ಬಾಳಲಿ
.
ಕಷ್ಟಗಳನು ತಳ್ಳೋಣ ಪಾಳು ಗುಂಡಿಗೆ
ಕಷ್ಟಗಳನು ತಳ್ಳೋಣ ಪಾಳು ಗುಂಡಿಗೆ
ಸಕಲಗಳನು ಮೆಟ್ಟುವ ಮೂಡಲಿ ಗುಂಡಿಗೆ
ಇಷ್ಟಗಳನು ಸಾಧಸಿ ಹಂಚೋಣ ಮಂಡಿಗೆ.
.
.
ಛಲವು ಮೂಡಲಿ ಮೊಗದಲಿ
ಫಲವು ದೊರೆಯಲಿ ಯುಗದಲಿ
ಬರಲಿ ಹೊಸ ವರುಷ ಬಾಳಲಿ
.
ಒಣಗಿದ ಬೀಜ
ಒಣಗಿದ ಬೀಜ
ಭುವಿಯ ನೀರಿನ ಸೆಲೆಗೆ ಸಿಕ್ಕು
ಮೊಳೆತು ಹಸಿರಾಗುವಂತೆ,
ಬಂಜೆಯ ಒಡಲಲಿ
ಹೊಸ ಜೀವದ ಸುಳಿವಿನ
ಖುಷಿಯ ಕೊಟ್ಟಂತೆ,
ಸುಡು ಬಿಸಿಲಲಿ ವರುಣ
ಧರೆಗೆ ಹನಿಹನಿಗಳ
ಧಾರೆ ಎರೆದಂತೆ
ಜೊತೆಯಾಗಲಿ ಬರುವ ದಿನಗಳು
ನಮ್ಮೆಲ್ಲರನು ಸ್ವಾಗತಿಸಿ
ಸುಖದ ಹೂ ಮಳೆಗೈವಂತೆ
.
ಬರಲಿ ಹೊಸ ವರುಷ ಬಾಳಲಿ
ಬರಲಿ ಹೊಸ ವರುಷ ಬಾಳಲಿ
ತರಲಿ ಹರುಷವ ಬರುವ ದಿನಮಾನಗಳಲಿ.
.
– ಶಿವಾನಂದ್ ಕರೂರ್ ಮಠ್, ದಾವಣಗೆರೆ.
.
.
ಸುಂದರವಾದ ಶುಭಾಶಯ
ಹೊಸ ವರುಷಕೆ ಹು಼ಟ್ಟಿದ ಸ್ವಾಗತ ಗೀತೆ..ಚೆನ್ನಾಗಿದೆ.